Breaking News

ಮೀರಾ ಜಾಸ್ಮಿನ್ ಈಗ ರೀ ಎಂಟ್ರಿಗೆ ರೆಡಿಯಾಗಿದ್ದಾರೆಯಂತೆ..!

ನಿರ್ದೇಶಕರ ಕಣ್ಣು ತನ್ನ ಮೇಲೆ ಬೀಳುವಂತೆ ಹಾಟ್ ಫೋಟೋಗಳಿಗೆ ಪೋಸ್....

SHARE......LIKE......COMMENT......

ಬೆಂಗಳೂರು:

ನಾಯಕಿ ಮೀರಾ ಜಾಸ್ಮಿನ್ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಅರಸು ಚಿತ್ರದಲ್ಲಿ ಅವರ ನಟನೆಯನ್ನು ಯಾರೂ ಮರೆತಿಲ್ಲ. ಬಹಳ ದಿನಗಳಿಂದ ಸಿನಿಮಾದಿಂದ ದೂರವಿದ್ದರೂ ಈ ನಟಿಗೆ ಅಭಿಮಾನಿಗಳು ಕಡಿಮೆಯಾಗಿಲ್ಲ. ಮೀರಾ ಜಾಸ್ಮಿನ್ ತನ್ನ ಸೌಂದರ್ಯದಿಂದ ನೆಟ್ಟಿಗರ ಗಮನ ಸೆಳೆದಿದ್ದು, ಕಳೆದ ಕೆಲವು ತಿಂಗಳುಗಳಿಂದ ಅವರು ಶೇರ್ ಮಾಡುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ.

ಒಂದು ಕಾಲದಲ್ಲಿ ಬೆಳ್ಳಿತೆರೆಯಲ್ಲಿ ತನ್ನ ಹೋಮ್ಲಿ ಲುಕ್‌ನಿಂದ ಕಾಣಿಸಿಕೊಂಡು ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಂಡಿದ್ದ ಮೀರಾ ಜಾಸ್ಮಿನ್ ಈಗ ಹಿಂದೆಂದೂ ಕಾಣದಷ್ಟು ಬದಲಾಗಿದ್ದಾರೆ. ತುಂಬಾ ನ್ಯಾಚುರಲ್ ಆಗಿ ಕಾಣುವ ಮೀರಾ ಜಾಸ್ಮಿನ್ ಟ್ರ್ಯಾಕ್ ಬದಲಿಸಿ ಈಗ ಫ್ಯಾಶನ್ ದಿವಾ ಎನಿಸಿಕೊಳ್ಳುತ್ತಿದ್ದಾರೆ. ಒಂದಷ್ಟು ಕನ್ನಡ, ತೆಲುಗು ಸಿನಿಮಾ ಮಾಡಿ ನಂತರ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿರುವ ಮೀರಾ ಜಾಸ್ಮಿನ್ ಈಗ ರೀ ಎಂಟ್ರಿಗೆ ರೆಡಿಯಾಗಿದ್ದಾರೆಯಂತೆ. ಅದಕ್ಕಾಗಿಯೇ ನಿರ್ದೇಶಕರ ಕಣ್ಣು ತನ್ನ ಮೇಲೆ ಬೀಳುವಂತೆ ಹಾಟ್ ಫೋಟೋಗಳಿಗೆ ಪೋಸ್ ನೀಡುತ್ತಿದ್ದಾರೆ.

ಅರಸು, ಹೂ, ದೇವರು ಕೊಟ್ಟ ತಂಗಿ, ಮೌರ್ಯ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಮೋಡಿ ಮಾಡಿದ್ದ ಸುಂದರಿ, ಕೊನೆಯದಾಗಿ ಮೋಕ್ಷ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರೊಂದಿಗೆ ನಾಯಕಿಯಾಗಿ ನಟಿಸುವ ಅವಕಾಶವನ್ನು ಪಡೆದಿದ್ದರು. ಅದರ ನಂತರ ಅವರು ಅನೇಕ ಟಾಲಿವುಡ್ ಹಾಗೂ ಸ್ಯಾಂಡಲ್ವುಡ್ ಸ್ಟಾರ್ ಹೀರೋಗಳ ಎದುರು ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಮೀರಾ ಜಾಸ್ಮಿನ್ ಅವರು ಕನ್ನಡ ಜೊತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿ ಮಿಂಚುತ್ತಿದ್ದ ಕಾಲದಲ್ಲೇ ಮದುವೆಯಾಗಿ ಸಿನಿಮಾದಿಂದ ದೂರ ಸರಿದಿದ್ದರು. 2014 ರಲ್ಲಿ, ಅವರು ದುಬೈನಲ್ಲಿ ಎಂಜಿನಿಯರ್ ಆಗಿದ್ದ ಅನಿಲ್ ಜಾನ್ ಟೈಟಸ್ ಅವರನ್ನು ವಿವಾಹವಾಗಿ ದುಬೈಗೆ ತೆರಳಿದ್ದರು. ಕೆಲವು ವರ್ಷಗಳ ಗ್ಯಾಪ್ ತೆಗೆದುಕೊಂಡಿರುವ ಈ ಬ್ಯೂಟಿ ಈಗ ಗ್ರ್ಯಾಂಡ್ ರೀ ಎಂಟ್ರಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ಪೂಮರಂ ಸಿನಿಮಾ ಮಾಡಿದ್ದು ಇದೇ ಸಂದರ್ಭದಲ್ಲಿ. ಸದ್ಯ ಮೆಕಾಲೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮೀರಾ ಜಾಸ್ಮಿನ್ ತನ್ನ ಸೌಂದರ್ಯದಿಂದ ನೆಟ್ಟಿಗರ ಗಮನ ಸೆಳೆದಿದ್ದು, ಕಳೆದ ಕೆಲವು ತಿಂಗಳುಗಳಿಂದ ಅವರು ಶೇರ್ ಮಾಡುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಮೀರಾ ತಮ್ಮ ಗ್ಲಾಮರ್ ಹೆಚ್ಚಿಸಿಕೊಂಡಿರುವುದನ್ನು ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ. ಇನ್ನು ಅಭಿಮಾನಿಗಳು ಸಹ ಮೀರಾ ರೀ ಎಂಟ್ರಿಗೆ ಕಾಯುತ್ತಿದ್ದು, ಯಾವಾಗ ಎಂದು ಕೇಳುತ್ತಿದ್ದಾರೆ……