Breaking News

ಮನೆಯಲ್ಲಿ ಹಲ್ಲಿಗಳ ಕಾಟ ಹೆಚ್ಚಾಗಿದ್ಯಾ..?

ಮನೆಯಲ್ಲಿರುವ ವಸ್ತುಗಳಿಂದ ಸಿಗಲಿದೆ ಹಲ್ಲಿಗಳ ಕಾಟಕ್ಕೆ ಮುಕ್ತಿ....

SHARE......LIKE......COMMENT......

ಮನೆಮದ್ದು:

ಹಲ್ಲಿಯ ಮಲ ಮತ್ತು ಲಾಲಾರಸದಲ್ಲಿ ಇರುವ ಸಾಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾ ಇದ್ದು, ಇದು ತುಂಬಾನೇ ಅಪಾಯಕಾರಿಯಾಗಿದೆ. ಹೀಗಾಗಿಯೇ ಹಲ್ಲಿ ಬಿದ್ದ ಆಹಾರ ವಿಷವಾಗಿ ಮಾರ್ಪಡಲಿದೆ.. ಪರಿವಿಲ್ಲದೆ ಆಹಾರವನ್ನು ಸೇವನೆ ಮಾಡುವ ವ್ಯಕ್ತಿಯ ಜೀವಕ್ಕೆ ಸಂಚಕಾರ ತಂದೊಡ್ಡಲಿದೆ.. ಕೆಲವೊಮ್ಮೆ ಹಲ್ಲಿಬಿದ್ದ ಆಹಾರ ಸೇವಿಸಿದ ವ್ಯಕ್ತಿಯ ಸ್ಥಿತಿ ಗಂಭೀರವಾದ್ರೆ ಮತ್ತೆ ಕೆಲವೊಮ್ಮೆ ಆ ವ್ಯಕ್ತಿ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ

ನಾಯಿ(Dog) ಹಾಗೂ ಬೆಕ್ಕು(Cat) ಹೇಗೆ ಮನುಷ್ಯನ ಜೀವನದಲ್ಲಿ ಪ್ರತಿನಿತ್ಯ ಒಡನಾಡಿಗಳಾಗಿರುತ್ತವೋ ಹಾಗೆ ನಮಗೆ ಗೊತ್ತಿಲ್ಲದೆಯೇ ನಮ್ಮ ಮನೆಯ ಸದಸ್ಯರಂತೆ ಹಲ್ಲಿಗಳು(Lizard)ತಾವಾಗಿಯೇ ಬಂದು ವಾಸಮಾಡಲು ಶುರುಮಾಡಿಕೊಂಡು ಬಿಡುತ್ತವೆ. ಯಾವಾಗ ಅಂದ್ರೆ ಆಗ ಗೋಡೆ(Wall) ಕಡೆ ನೋಡಿದ್ರೆ ತಮ್ಮಷ್ಟಕ್ಕೆ ತಾವೇ ತಮ್ಮದೇ ಲೋಕದಲ್ಲಿ ಹಲ್ಲಿಗಳು ಓಡಾಡುತ್ತಿರುತ್ತವೆ. ಇಂತಹ ಹಲ್ಲಿಗಳನ್ನು ಕಂಡಾಗ ಹಾವು(Snakes)ಕಣ್ಣೆದುರಿಗೆ ಬಂತೇನೋ ಎನ್ನುವಷ್ಟು ಭಯ ಪಡುವವರು ಇದ್ದಾರೆ. ಇಂತಹ ಹಲ್ಲಿಗಳಿಂದ ಹಲವು ಬಾರಿ ಹಲವರ ಜೀವಕ್ಕೆ ಸಂಚಕಾರ ಬಂದಿದ್ದು ಇದೆ. ಹೀಗಾಗಿ ಸದಾ ಗೋಡೆಮೇಲೆ ಕರೆಯದೆ ಬರುವ ಅತಿಥಿಯಂತೆ ಇರುವ ಹಲ್ಲಿಗಳನ್ನು ಮನೆಯಿಂದ ಹೊರಹಾಕಲು ನಾನಾ ಸರ್ಕಸ್ ಮಾಡಬೇಕಾಗುತ್ತೆ. ಜೊತೆಗೆ ಈಗ ಹಲ್ಲಿಗಳನ್ನು ಕೊಲ್ಲಲು ನಾನಾರೀತಿಯ ಔಷಧಗಳು ಬಂದಿವೆ. ಆದ್ರೆ ಮನೆಯಲ್ಲೇ ಸಿಗುವ ಕೆಲವು ವಸ್ತುಗಳಿಂದ(Home Remedies )ಹಲ್ಲಿಗಳನ್ನು ಮನೆಯಿಂದ ಹೊರ ಹಾಕುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಮನೆಯಲ್ಲಿರುವ ವಸ್ತುಗಳಿಂದ ಸಿಗಲಿದೆ ಹಲ್ಲಿಗಳ ಕಾಟಕ್ಕೆ ಮುಕ್ತಿ

ಪುರಾಣದ ಪ್ರಕಾರ, ಶಾಸ್ತ್ರಗಳಲ್ಲಿ ಹಲ್ಲಿಗಳು ಮನೆಯಲ್ಲಿ ಲೊಚಗುಟ್ಟಿದ್ರೆ ಅವುಗಳು ಲೊಚಗುಟ್ಟಿದರ ಸಮಯ ಹಾಗೂ ಸಂದರ್ಭಕ್ಕೆ ಅದು ಶುಭ ಎಂದು ಪರಿಗಣಿಸಲಾಗುತ್ತದೆ. ಆದರೆ ನಿಜಜೀವನದಲ್ಲಿ ಮನೆಯಲ್ಲಿ ಹಲ್ಲಿ ಇರುವುದರಿಂದ ಆರೋಗ್ಯಯುತ ಜೀವನಕ್ಕೆ ಸಂಚಕಾರಿ. ಹೀಗಾಗಿ ಪ್ರತಿನಿತ್ಯ ನಾವು ಮನೆಯಲ್ಲಿ ಬಳಕೆ ಮಾಡುವ ವಸ್ತುಗಳನ್ನು ಬಳಸಿಕೊಂಡು ಸರಾಗವಾಗಿ ಹಲ್ಲಿಗಳನ್ನು ಮನೆಯಿಂದ ಹೊರ ಹಾಕಬಹುದಾಗಿದೆ..

1) ಈರುಳ್ಳಿ : ನಾವು ಒಂದಲ್ಲ ಒಂದು ಅಡಿಗೆ ಮಾಡಬೇಕು ಅಂದ್ರೆ ಈರುಳ್ಳಿ ಕಡ್ಡಾಯವಾಗಿ ಇರಲೇಬೇಕು.. ಅಡುಗೆಮನೆಯ ಸದಸ್ಯನಾಗಿರುವ ಈರುಳ್ಳಿ, ಹಲವು ಸಮಸ್ಯೆಗಳ ನಿವಾರಕ ಕೂಡ.. ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಈರುಳ್ಳಿ ಕೂಡ ಸಹಾಯಕವಾಗಿದೆ. ಈರುಳ್ಳಿಯ ಸಣ್ಣ ತುಂಡುಗಳನ್ನು ಕತ್ತರಿಸಿ ಅದನ್ನು ದಾರದಲ್ಲಿ ಕಟ್ಟಿ, ಎಲ್ಲೆಲ್ಲಿ ಹಲ್ಲಿಗಳು ಓಡಾಡುತ್ತವೋ ಆಯಾ ಜಾಗದಲ್ಲಿ ನೇತು ಹಾಕಿದ್ರೆ ಹಲ್ಲಿ ಆ ಕಡೆ ತಲೆ ಕೂಡ ಹಾಕುವುದಿಲ್ಲ..

2) ಬೆಳ್ಳುಳ್ಳಿ : ಈರುಳ್ಳಿಯಂತೆ ಸದಾ ಅಡುಗೆ ಮನೆಯಲ್ಲಿ ಸಿಗುವ ಬೆಳ್ಳುಳ್ಳಿ ಕೂಡ ಹಲ್ಲಿಗಳನ್ನು ಓಡಿಸಲು ಸಹಾಯಕಾರಿಯಾಗಿದೆ. ಬೆಳ್ಳುಳ್ಳಿ ಎಸಳುಗಳನ್ನು ದಾರದಲ್ಲಿ ಕಟ್ಟಿ ಹಲ್ಲಿ ಓಡಾಡುವ ಜಾಗದಲ್ಲಿ ಇರಿಸುವುದರಿಂದ, ಪಲ್ಲಿಗಳ ಕಾಟದಿಂದ ಮುಕ್ತಿ ಪಡೆಯಬಹುದು..

3) ಕಾಫಿ ಪೌಡರ್ : ಕಾಫಿ ಪೌಡರನ್ನು ಟೊಬಾಕೊ ಪೌಡರ್‌ ಜೊತೆ ಮಿಕ್ಸ್‌ ಮಾಡಿ. ಈ ಮಿಶ್ರಣದ ಸಣ್ಣ ಬಾಲ್‌ಗಳನ್ನು ತಯಾರಿಸಿ. ಟೂಥ್‌ಪಿಕ್‌ ತೆಗೆದುಕೊಂಡು ಆ ಬಾಲ್‌ಗಳನ್ನು ಅದಕ್ಕೆ ಫಿಕ್ಸ್‌ ಮಾಡಿ. ಈ ಟೂಥ್‌ಪಿಕ್‌ಗಳನ್ನು ಹಲ್ಲಿ ಬರುವ ಜಾಗದಲ್ಲಿ ಇಟ್ಟುಬಿಡಿ. ಇದನ್ನು ಸೇವಿಸಿದರೆ ಹಲ್ಲಿಗಳು ಸಾಯುತ್ತದೆ.

4)ಕೋಲ್ಡ್‌ ವಾಟರ್‌ : ಯೆಸ್‌ ಕೋಲ್ಡ್‌ ವಾಟರ್‌ ಮೂಲಕವೂ ನೀವು ಹಲ್ಲಿಯನ್ನು ಓಡಿಸಬಹುದು. ಕೋಲ್ಡ್‌ ನೀರನ್ನು ಹಲ್ಲಿಗಳ ಮೇಲೆ ಸಿಂಪಡಿಸಿ. ಇದರಿಂದ ಅವುಗಳ ಬಾಡಿ ಟೆಂಪ್ರೇಚರ್‌ ಕಡಿಮೆಯಾಗಿ ಅದಕ್ಕೆ ಚಲಿಸಲು ಸಹ ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಅದನ್ನು ಒಂದು ಬಾಕ್ಸ್‌ನಲ್ಲಿ ಹಾಕಿ ಬಿಸಾಕಿ ಬಿಡಬಹುದು .

5) ಕೆಂಪು ಮೆಣಸಿನಕಾಯಿ ಮತ್ತು ಕರಿಮೆಣಸು : ಈರುಳ್ಳಿ ಹಾಗೂ ಬೆಳ್ಳುಳ್ಳಿ ಯಂತೆ ಅಡುಗೆ ಮನೆಯಲ್ಲಿ ಸಿಗುವ ಕೆಂಪು ಮೆಣಸಿನಕಾಯಿ ಮತ್ತು ಕರಿಮೆಣಸಿನ ಸಹಾಯದಿಂದ ಸ್ಪ್ರೇ ತಯಾರು ಮಾಡಿಕೊಂಡು ಅದನ್ನ ಬಾಟಲಿಯಲ್ಲಿ ಹಾಕಿ ಕಿಟಕಿ ಬಾಗಿಲು ಸಿರಿ ಸದಾ ಅಲೆಗಳು ಓಡಾಡುವ ಜಾಗದಲ್ಲಿ ಸ್ಪ್ರೇ ಮಾಡುವುದರಿಂದ ಹಲ್ಲಿಗಳು ಮನೆಯಿಂದ ಓಡಿ ಹೋಗ ಲಿವೆ..

6) ಮೊಟ್ಟೆ ಸಿಪ್ಪೆ : ಹಲ್ಲಿಗಳಿಗೆ ಸೈಕಾಲಜಿಯಾಗಿ ಮೋಸ ಮಾಡಲು ಮೊಟ್ಟೆ ಸಿಪ್ಪೆಗಳು ಸಹಾಯಕವಾಗಿದೆ. ಈ ಮೊಟ್ಟೆ ಸಿಪ್ಪೆಗಳನ್ನು ನೋಡಿ ಅಲ್ಲಿ ಬೇರೆ ಯಾವುದೋ ದೊಡ್ಡ ಜೀವಿ ಇದೆ ಎಂದು ಭಾವಿಸಿ ಹಲ್ಲಿಗಳು ಅಲ್ಲಿಂದ ಬೇರೆಡೆ ಹೋಗುತ್ತದೆ…..