ಬೆಂಗಳೂರು:
ಮುಂಬೈ ನ 16 (ಯುಎನ್ಐ) ಭಾರತೀಯ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಗೆ ಕಸ್ಟಮ್ಸ್ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಯುಎಇಯಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಿ ಭಾರತಕ್ಕೆ ಮರಳುತ್ತಿರುವ ಪಾಂಡ್ಯ ವಿರುದ್ಧ ಕಸ್ಟಮ್ಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.
ಭಾನುವಾರ ರಾತ್ರಿ ಎರಡು ದುಬಾರಿ ವಾಚ್‌ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಂಡ್ಯ ಅವರನ್ನು ತಡೆದಿದ್ದರು. ಕೈಗಡಿಯಾರುಗಳು ಹೇಗೆ ಬಂದ್ವು? ಎಲ್ಲಿ ಖರೀದಿ ಮಾಡಿದ್ರಿ? ಇವುಗಳ ಬಿಲ್ ಎಲ್ಲಿ ಅಂತಾ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ.
ಆದ್ರೆ, ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಅಧಿಕಾರಿಗಳ ಯಾವ ಪ್ರಶ್ನೆಗೂ ಸಮರ್ಪಕ ಉತ್ತರ ನೀಡಿಲ್ಲ. ಅಲ್ಲದೆ ದುಬಾರಿ ವಾಚ್ ಗಳಿಗೆ ಸಂಬಂಧಿಸಿದಂತೆ ಬಿಲ್‌ನ್ನು ಸಹ ತೋರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಎರಡೂ ವಾಚುಗಳನ್ನು ಜಪ್ತಿ ಮಾಡಿಕೊಂಡಿದೆ. ಎರಡೂ ಕೈಗಡಿಯಾರಗಳ ಬೆಲೆ ಸುಮಾರು 5 ಕೋಟಿ ರೂಪಾಯಿ ಇರಬಹುದು ಎಂದು ಹೇಳಲಾಗುತ್ತಿದೆ……