Breaking News

ಐಟಿ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕಸದ ಕಿರಿಕ್​​​..!

ಕಸ ಸಂಸ್ಕರಣೆಗೆ ಬೆಂಗಳೂರಿನಲ್ಲಿ ಪರದಾಟ....

SHARE......LIKE......COMMENT......

ಬೆಂಗಳೂರು:

ಐಟಿ ಸಿಟಿ ಬೆಂಗಳೂರಿಗೆ ಮತ್ತೆ ಕಸದ ಟೆನ್ಷನ್​​​ ಶುರುವಾಗಿದೆ. ಕಸ ಸಂಸ್ಕರಣೆಗೆ ಬೆಂಗಳೂರು ಪಾಲಿಕೆ ಪರದಾಡುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಚಿಗರನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕ ಬಂದ್​ ಆಗಿದೆ. MSGP ಇನ್​​ಫ್ರಾಟೆಕ್​​​​​​​ ನಿರ್ವಹಣೆ ಮಾಡ್ತಿದ್ದ ಈ ಘಟಕದಿಂದ ಕೊಳಕು ನೀರು ನಮ್ಮ ಹೊಲಗಳಿಗೆ ಹರಿಯುತ್ತಿದೆ. ಬೆಳೆದ ಬೆಳೆಗಳೂ ವಿಷಕಾರಿಯಾಗ್ತಿವೆ ಎಂದು ಭಕ್ತರಹಳ್ಳಿ ಗ್ರಾಮ ಪಂಚಾಯ್ತಿ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ಮಾಡಿದ್ರು. ಸ್ಪಟಿಕಪುರಿ ಕ್ಷೇತ್ರದ ನಂಜಾವಧೂತ ಸ್ವಾಮೀಜಿ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಗೆ ಬೆಂಬಲ ನೀಡಿದ್ರು. ಹೀಗಾಗಿ ಕಸ ವಿಲೇವಾರಿ ಬಂದ್ ಆಗಿದೆ. ಬೆಂಗಳೂರಿನಲ್ಲಿ ನಿತ್ಯ 2000 ಟನ್​​​ ತ್ಯಾಜ್ಯ ಸಂಗ್ರಹ ಆಗ್ತಾ ಇದ್ದು ಚಿಗರನಹಳ್ಳಿಯಲ್ಲಿ ನಿತ್ಯ 500 ಟನ್ ಕಸ ಸಂಸ್ಕರಣೆ ಆಗ್ತಿತ್ತು. ಇದೀಗ ಪರ್ಯಾಯ ಮಾರ್ಗಕ್ಕಾಗಿ BBMP ಒದ್ದಾಡುತ್ತಿದೆ. ಕಸ ನಿರ್ವಹಣೆಗೆ ಬಿಬಿಎಂಪಿ NOC ಪಡೆದಿಲ್ಲ ಎಂದು ಸ್ಥಳೀಯರು ಆರೋಪ ಮಾಡ್ತಿದ್ದಾರೆ. 2014ರಿಂದ ದೊಡ್ಡಬಳ್ಳಾಪುರದಲ್ಲಿ ಕಸ ವಿಲೇವಾರಿ ಘಟಕ ನಡೀತಿತ್ತು…..