ನವದೆಹಲಿ:
ನೂತನ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ವಾಪಸ್ ಪಡೆದುಕೊಂಡಿದೆ. ಇವತ್ತು ಸಂಸತ್ತಿನ ಉಭಯ ಸದನಗಳಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯುವ ಬಿಲ್ಗೆ ಅನುಮೋದನೆ ದೊರಕಿದೆ. ಲೋಕಸಭೆ ಮತ್ತು ರಾಜ್ಯಸಭೆಗಳು ಧ್ವನಿ ಮತದಿಂದ ಕೃಷಿ ಕಾಯ್ದೆ ವಾಪಸ್ ಪಡೆಯುವ ಮಸೂದೆಯನ್ನು ಪಾಸ್ ಮಾಡಿದವು. ಪ್ರಧಾನಿ ಮೋದಿ ಕೊಟ್ಟ ಮಾತಿನಂತೆ ಅಧಿವೇಶನದ ಮೊದಲ ದಿನವೇ ಕಾಯ್ದೆ ವಾಪಸ್ ಬಿಲ್ ಮಂಡಿಸಿದ್ರು. ಕೃಷಿ ಸಚಿವರ ಪ್ರಸ್ತಾವಕ್ಕೆ ಸದನದ ಒಪ್ಪಿಗೆ ದೊರಕಿತು. ಇನ್ನು ರಾಜ್ಯಸಭೆಯಲ್ಲೂ ಕೃಷಿ ಸಚಿವ ನರೇಂದ್ರಸಿಂಗ್ ಥೋಮರ್ ಕಾಯ್ದೆ ವಾಪಸ್ ಮಸೂದೆಯನ್ನು ಮಂಡಿಸಿ ಒಪ್ಪಿಗೆ ಪಡೆದರು. ಕಾಂಗ್ರೆಸ್ ಸೇರಿದಂತೆ ಕೆಲ ವಿರೋಧ ಪಕ್ಷಗಳು ಕಾಯ್ದೆ ವಾಪಸ್ ವಿಚಾರ ಚರ್ಚೆಗೆ ಅವಕಾಶ ನೀಡ್ಬೇಕು ಎಂದು ಆಗ್ರಹಿಸಿದವು.