Breaking News

ಅಪ್ಪು ಪುಣ್ಯ ಸ್ಮರಣೆ ಇಂದು ಅನ್ನಸಂತರ್ಪಣೆ..!

ವೆಜ್, ನಾನ್ ವೆಜ್ ಅಡುಗೆ ಸಿದ್ಧ....

SHARE......LIKE......COMMENT......

ಬೆಂಗಳೂರು:

ಒಂದು ಬಾರಿಗೆ ಐದು ಸಾವಿರ ಜನರು ಊಟಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಎರಡು ಗೇಟ್ ಗಳಲ್ಲಿ 24 ರೂಮಿನೊಳಗೆ ಐದು ಸಾವಿರ ಕುರ್ಚಿ ಹಾಗೂ ಟೇಬಲ್ ಗಳನ್ನು ಹಾಕಲಾಗಿದೆ. ಆಗಮಿಸುವ ಅಭಿಮಾನಿಗಳಿಗೆ ಮಾಂಸಾಹಾರ ಮತ್ತು ಸಸ್ಯಹಾರ ಸಹ ಸಿದ್ಧಪಡಿಸಲಾಗಿದೆ.

ನಾನ್ ವೆಜ್ ಅಡುಗೆ ಮಾಹಿತಿ:

ಗೀ ರೈಸ್, ಚಿಕನ್ ಚಾಪ್ಸ್, ಚಿಕನ್ ಕಬಾಬ್, ಕೋಳಿ ಮೊಟ್ಟೆ, ಅಕ್ಕಿಪೇಣಿ ಪಾಯಸ ಹಾಗೂ ಅನ್ನ, ರಸಂ ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ. ಮಾಂಸಾಹಾರ ಅಡುಗೆ ಸಿದ್ಧಪಡಿಸಲು ಸೌದೆ ಒಲೆಯ ವ್ಯವಸ್ಥೆ ಮಾಡಲಾಗಿದೆ.

ವೆಜ್ ಅಡುಗೆ ಮಾಹಿತಿ:

ಗೀರೈಸ್ ಮತ್ತು ಕುರ್ಮ, ಹಾಲು ಕಬಾಬ್, ಬೇಬಿ ಕಾರ್ನ್ ಲಾಲಿ ಪಾಪ್, ಅಕ್ಕಿಪೇಣಿ ಪಾಯಸ, ಮಸಾಲೆ ವಡೆ ಹಾಗೂ ಅನ್ನರಸಂ . ಸಸ್ಯಹಾರ ಅಡುಗೆಗೆ ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಮಾಡಲಾಗಿದೆ.

50, 60,70 ಹಾಗೂ 80 ಕೆಜಿಯ ದೊಡ್ಡ ಪಾತ್ರೆಗಳಲ್ಲಿ ಗೀರೈಸ್ ಮಾಡಲಾಗುತ್ತಿದೆ. ಪುನೀತ್ ಕುಟುಂಬದ ಎಲ್ಲಾ ಕಾರ್ಯಕ್ರಮಗಳಲ್ಲಿ ಅಡುಗೆ ಮಾಡುತ್ತಿದ್ದ ಬಾಣಸಿಗರನ್ನು ಇಲ್ಲಿಯೂ ನಿಯೋಜನೆ ಮಾಡಲಾಗಿದೆ. ಭಾನುವಾರವೇ ಅಡುಗೆ ಸಿದ್ಧತೆ ಆರಂಭಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 3 ಎಸಿಪಿ, 32 ಪೊಲೀಸ್ ಇನ್ಸ್ಪೆಕ್ಟರ್, 70 ಪಿಎಸ್ಐ , 6 ಕೆಎಸ್ಆರ್ ಪಿ ತುಕಡಿ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಗಾಯತ್ರಿ ವಿಹಾರದ ಗೇಟ್ ನಂಬರ್ 4 ರಲ್ಲಿ VIP ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು,. ಕೃಷ್ಣ ವಿಹಾರ್ ಗೇಟ್ ನಂಬರ್ 1 ರಲ್ಲಿ ಸಾರ್ವಜನಿಕರ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಗೇಟ್ ನಂಬರ್ 2 ಗಾಯತ್ರಿ ವಿಹಾರ್ ಮೂಲಕ ಸಾರ್ವಜನಿಕರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಗೇಟ್ ನಂಬರ್ 2 ರಲ್ಲಿಯೇ VIP ಗಳಿಗೆ ಪ್ರತ್ಯೇಕ ಎಂಟ್ರಿ ನೀಡಲಾಗಿದೆ……