ಬೆಂಗಳೂರು:
ಪುನೀತ್ ರಾಜ್ಕುಮಾರ್ ನಟನೆ ಜತೆಗೆ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದರು. ಆದರೆ, ಅವರು ಮಾಡಿದ ಸಹಾಯವನ್ನು ಎಂದೂ, ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಅವರು ನಿಧನ ಹೊಂದಿದ ಬಳಿಕ ಈ ವಿಚಾರಗಳು ಹೊರಗೆ ಬರುತ್ತಿವೆ. ಪುನೀತ್ ಇಷ್ಟೊಂದು ಸಹಾಯ ಮಾಡಿದ್ರಾ ಎಂದು ಎಲ್ಲರೂ ಅಚ್ಚರಿಪಡುವಷ್ಟು ಒಳ್ಳೆಯ ಕೆಲಸಗಳನ್ನು ಅವರು ಮಾಡಿದ್ದಾರೆ. ಕಷ್ಟಗಳಿಗೆ ಅಂತ್ಯ ಹಾಡಬೇಕು ಎಂದು ‘ಕನ್ನಡದ ಕೋಟ್ಯಧಿಪತಿ’ ಆಡೋಕೆ ಬರುವವರು ಅನೇಕರಿದ್ದಾರೆ. ಇಲ್ಲಿಗೆ ಬಂದು ಹಣ ಗೆಲ್ಲೋಕೆ ಸಾಧ್ಯವಾಗದೆ ಇದ್ದರೆ ಅಂಥ ಸಂದರ್ಭದಲ್ಲಿ ಪುನೀತ್ ಅವರೇ ಚೆಕ್ ಬರೆದು ಕೊಟ್ಟ ಉದಾಹರಣೆ ಇದೆಯಂತೆ. ಈ ಬಗ್ಗೆ ಪುನೀತ್ ಮ್ಯಾನೇಜರ್ ಆಗಿದ್ದ ವಜ್ರೇಶ್ವರಿ ಕುಮಾರ್ ಅವರು ಹಂಚಿಕೊಂಡ ವಿಚಾರಗಳು ಅನೇಕರಲ್ಲಿ ಅಚ್ಚರಿ ಮೂಡಿಸಿದೆ……