Breaking News

ಕ್ರಿಪ್ಟೋಕರೆನ್ಸಿ ಕಂಪ್ಲೀಟ್ ಬ್ಯಾನ್: ಶೇಕಡಾ 18 ರಷ್ಟು ಕುಸಿತ..!

ಹೊಸ ಸ್ವರೂಪದ ಕ್ರಿಪ್ಟೋಕರೆನ್ಸಿ ಜಾರಿಗೆ ಬರುವ ಸಾಧ್ಯತೆ....

SHARE......LIKE......COMMENT......

ಬೆಂಗಳೂರು:

(ಯುಎನ್ಐ) ಕ್ರಿಪ್ಟೋಕರೆನ್ಸಿ ಮೇಲೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ ಎಂಬ ಸುದ್ದಿಗೆ ಡಿಜಿಟಲ್ ಮಾದರಿಯ ಕರೆನ್ಸಿಗಳು ಪ್ರಪಾತಕ್ಕೆ ಕುಸಿದಿವೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ, ಎಲ್ಲ ತರಹದ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಸಂಬಂಧ ಮಸೂದೆ ಜಾರಿಗೆ ತರಲು ತಯಾರಿ ನಡೆಸಿದೆ. ಇಂಥ ಸುದ್ದಿ ಹೊರಬಿದ್ದ ನಂತ್ರ ಎಲ್ಲ ಪ್ರಮುಖ ಕ್ರಿಪ್ಟೋಕರೆನ್ಸಿ ಬೆಲೆಗಳು ಶೇಕಡಾ 15ಕ್ಕಿಂತ ಅಧಿಕ ಕುಸಿತಕಂಡಿದ್ದು, ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಬಿಟ್‌ಕಾಯಿನ್ ಶೇಕಡಾ 15, ಎಥೆರಿಯಮ್ 12ರಷ್ಟು, ಟೆಥರ್ ಶೇಕಡಾ 6 ಮತ್ತು ಯುಎಸ್‌ಡಿ ಕಾಯಿನ್ ಶೇಕಡಾ 8 ರಷ್ಟು ಕುಸಿತ ಕಂಡಿದೆ. ಭಾರತದಲ್ಲಿ, ಬಿಟ್‌ ಕಾಯಿನ್ ಬೆಲೆ ಶೇಕಡಾ 15 ರಷ್ಟು ಕುಸಿದು 40,28,000 ರೂ., ಎಥೆರಿಯಮ್ 3,05,114 ರೂ., ಟೆಥರ್ ಸುಮಾರು 76 ರೂ., ಕಾರ್ಡಾನೊ ಸುಮಾರು 137 ರೂಪಾಯಿಕ್ಕೆ ಬಂದು ನಿಂತಿದೆ.

ಎಲ್ಲಾ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು, ಸರ್ಕಾರವು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ “ದಿ ಕ್ರಿಪ್ಟೋಕರೆನ್ಸಿ ಆಂಡ್ ರೆಗ್ಯುಲೇಷನ್ ಆಫ್ ಆಫಿಸಿಯಲ್ ಡಿಜಿಟಲ್ ಕರೆನ್ಸಿ ಬಿಲ್, 2021” ಜಾರಿಗೆ ತರಲು ತಯಾರಿ ನಡೆಸಿದೆ. ಖಾಸಗಿ ಕ್ರಿಪ್ಟೋಕರೆನ್ಸಿ ಬದಲಾಗಿ ಆರ್ ಬಿ ಐ ನಿಯಂತ್ರಣದ ಡಿಜಿಟಲ್ ಕರೆನ್ಸಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರುವ ಸಾಧ್ಯತೆ ಇದೆ. ಮುಂದಿನ ವರ್ಷದಿಂದ ಈ ಹೊಸ ಸ್ವರೂಪದ ಕ್ರಿಪ್ಟೋಕರೆನ್ಸಿ ಜಾರಿಗೆ ಬರುವ ಸಾಧ್ಯತೆ ಇದೆ……