Breaking News

ಎಲೆಕ್ಟ್ರಿಕ್ ಗಾಡಿಗಳಿಗಾಗಿ ಬಂತು ಬೆಸ್ಕಾಂನಿಂದ ಚಾರ್ಜಿಂಗ್ ಸ್ಟೇಶನ್..!

ಗ್ರಾಹಕರ ಅನುಕೂಲಕ್ಕಾಗಿ EV ಮಿತ್ರ ಆ್ಯಪ್​ ಬಿಡುಗಡೆ….

SHARE......LIKE......COMMENT......

ಬೆಂಗಳೂರು:

ಪೆಟ್ರೋಲ್, ಡೀಸೆಲ್ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದರಿಂದ ಜನ ಇದೀಗ ಚಾರ್ಜಿಂಗ್ ವೇಯಿಕಲ್ಸ್ ಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾವಿರಾರು ಎಲೆಕ್ಟ್ರಿಕ್ ವಾಹನಗಳು ಓಡಾಡುತ್ತಿದ್ದು, ಈ ನಿಟ್ಟಿನಲ್ಲಿ ಬೆಸ್ಕಾಂ 136 ಎಲೆಕ್ಟ್ರಿಕ್ ಚಾರ್ಜಿಂಗ್ ಪಾಂಯ್ಟ್ಸ್ ಗಳನ್ನ ಮಾಡಿದೆ. ಇದರ ಬಳಕೆಗಾಗಿ ಇಲಾಖೆ ಆ್ಯಫ್ ಒಂದನ್ನ ಬಿಡುಗಡೆ ಮಾಡಿದೆ.

ಎಲೆಕ್ಟ್ರಿಕ್ ವೆಹಿಕಲ್ಸ್ ಗೆ ಬೇಕಾದ ಚಾರ್ಜಿಂಗ್ ಸ್ಟೇಷನ್ ಗಳನ್ನ ಬೆಸ್ಕಾಂ ಸ್ಥಾಪಿಸ್ತಿರೋ ವಿಷಯ ಎಲ್ಲರಿಗೂ ಗೊತ್ತೇ ಇದೆ ಸದ್ಯ ಬೆಸ್ಕಾಂ 136 ಚಾರ್ಜಿಂಗ್ ಪಾಂಯ್ಟ್ಸ್ ಗಳನ್ನ ನಿರ್ಮಿಸಿದ್ದು ಮುಂದೆ ಈ ಸಂಖ್ಯೆಯನ್ನ ಹೆಚ್ಚಿಸುವ ಯೋಜನೆ ರೂಪಿಸಿದೆ. ಗ್ರಾಹಕರಿಗೆ ಚಾರ್ಜಿಂಗ್ ಸ್ಟೇಷನ್ ಗಳ ಮಾಹಿತಿ ಹಾಗೂ ಬಳಕೆಗಾಗಿ EV ಮಿತ್ರ ಎಂಬ ಆ್ಯಪ್ ಅನ್ನ ಇಲಾಖೆ ಬಿಡುಗಡೆ ಮಾಡಿದೆ. ಇವಿ ಮಿತ್ರ ಆ್ಯಫ್ ಅನ್ನ ಗೂಗಲ್ ಫ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಹೆಸರು, ವೆಹಿಕಲ್ ನಂಬರ್ ಅನ್ನ ರಿಜಿಸ್ಟ್ರೇಶನ್ ಮಾಡಬೇಕು ಇದರಲ್ಲಿ ಆನ್ ಲೈನ್ ಪೇಮಂಟ್ ವ್ಯವಸ್ಥೆ ಇದ್ದು ಮಿನಿಮಮ್ 50 ರೂ ಬ್ಯಾಲೆನ್ಸ್ ಇರಬೇಕಾಗಿದೆ.

ಇನ್ನು ಈ ಆಫ್ ನಲ್ಲಿರೋ ಸೌಲಭ್ಯಗಳನ್ನ ನೋಡೋದಾದ್ರೆ…

1. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಚಾರ್ಜಿಂಗ್ ಯುನಿಟ್ಗಳಿವೆ ಅನ್ನೋ ಮಾಹಿತಿ
2. ಚಾರ್ಜಿಂಗ್ ಯುನಿಟ್ ಗಳ ಅಡ್ವಾನ್ಸ್ ಬುಕ್ಕಿಂಗ್ ವ್ಯವಸ್ಥೆ
3. ಚಾರ್ಜಿಂಗ್ ಸ್ಟೇಶನ್ ನ ನ್ಯಾವಿಗೇಶನ್ ರೂಟ್ ಮ್ಯಾಫ್ ಲಭ್ಯ
4. 3 ರೀತಿಯ ಚಾರ್ಜಿಂಗ್ ಯುನಿಟ್ ನ ಆಯ್ಕೆ ಮಾಡಿಕೊಳ್ಳಬಹುದು
5. ಎಷ್ಟು ಚಾರ್ಜಿಂಗ್ ಆಗ್ತಿದೆ, ಅದರ ಬೆಲೆಯ ಮಾಹಿತಿ ಲಭ್ಯ

ಇನ್ನೂ ಇವಿ ಮಿತ್ರ ಅಫ್ಲಿಕೇಶನ್ ಅನ್ನೂ 1 ಸಾವಿರಕ್ಕೂ ಹೆಚ್ಚು ಜನ ಸದ್ಯ ಬಳಕೆ ಮಾಡುತ್ತಿದ್ದಾರೆ. ಪ್ರತಿ ತಿಂಗಳು 4500 ಸಾವಿರಕ್ಕೂ ಹೆಚ್ಚಿನ ವಾಹನಗಳನ್ನ ಚಾರ್ಜ್ ಮಾಡಲಾಗುತ್ತಿದೆ. ಈ ಆ್ಯಫ್ ಯಾವುದೇ ರೀತಿ ದುರ್ಬಳಕೆ ಆಗದಂತೆ ಗ್ರಾಹಕರ ಹಿತದೃಷ್ಠಿಯಿಂದ ಸೈಬರ್ ಸೆಕ್ಯುರಿಟಿಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಬಿಎಂಟಿಸಿ ಸಹ ಎಲೆಕ್ಟ್ರಿಕ್ ಬಸ್ ಬಳಕೆಗೆ ಪ್ರೋತ್ಸಾಹ ನೀಡುತ್ತಿರುವುದರಿಂದ 300 ಬಸ್​ಗಳಿಗೆ ಚಾರ್ಜಿಂಗ್ ವ್ಯವಸ್ಥೆಗೆ ಬೆಸ್ಕಾಂಗೆ ಪ್ರಸ್ಥಾವನೆಯನ್ನೂ ಸಹ ಸಲ್ಲಿಸಲಾಗಿದೆ……