Breaking News

ಸಿನಿಮಾ ಒಂದು ವೃತ್ತಿ, ಅದಕ್ಕೂ ಮೀರಿದ್ದು ಬದುಕು.. ಎಂದ ಪವರ್ ಸ್ಟಾರ್ ಪುನೀತ್..!

ಅಪ್ಪು ಮಾಡಿದ್ದ ಕೊನೆಯ ಇನ್ಸ್ಟಾಗ್ರಾಂ ಪೋಸ್ಟ್....

SHARE......LIKE......COMMENT......

ಬೆಂಗಳೂರು:

ಸಿನಿಮಾ ಒಂದು ವೃತ್ತಿ, ಅದಕ್ಕೂ ಮೀರಿದ್ದು ಬದುಕು..ಆ ಬದುಕು ಮುಖ್ಯ ಎನ್ನುತ್ತಿದ್ದರು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar). ಸಿನಿಮಾಗಳು ಕಮರ್ಷಿಯಲ್ ಆಗಿ ಓಡಿದರೆ ಆಗ ನಿರ್ಮಾಪಕರು ಸೇರಿದಂತೆ ಇಡೀ ತಂಡಕ್ಕೆ ಲಾಭವೇ. ಆದರೆ ಕೆಲವು ಚಿತ್ರಗಳು ಹಣ ಮಾಡದಿದ್ದರೂ ಸದಭಿರುಚಿಯದ್ದಾಗಿರುತ್ತವೆ. ಇತ್ತೀಚೆಗೆ ಅಂಥಾ ಚಿತ್ರಗಳ ಕಡೆ ಪುನೀತ್ ರಾಜ್ಕುಮಾರ್ ಒಲವು ಹೆಚ್ಚಾಗಿತ್ತು. ಫ್ರೆಂಚ್ ಬಿರಿಯಾನಿ (French Biryani), ಲಾ (Law), ಪವನ್ ಕುಮಾರ್ ಜೊತೆ ಮುಂದೆ ಮಾಡಬೇಕಿದ್ದ ದ್ವಿತ್ವ (Dvitva) ಮುಂತಾದ ಸಿನಿಮಾಗಳು ಇದಕ್ಕೆ ಸಾಕ್ಷಿ. ಆದ್ರೆ ಈಗ ಎಲ್ಲರೂ ಯೋಚಿಸುತ್ತಿರುವುದು ಅಪ್ಪು ಮಾಡಿದ್ದ ಆ ಕೊನೆಯ ಇನ್ಸ್ಟಾಗ್ರಾಂ ಪೋಸ್ಟ್ ಬಗ್ಗೆ. ಪುನೀತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಇಬ್ಬರು ಸ್ಕೂಬಾ ಡೈವರ್​ಗಳು ಸಮುದ್ರದಾಳದಲ್ಲಿ ಇರುವ ಚಿತ್ರ ಅದು. ಅದರ ಮೇಲೆ 1.11.21 ಎಂದು ದಿನಾಂಕ ಬರೆದಿತ್ತು. ಕೇವಲ ಎರಡು ದಿನಗಳ ಹಿಂದೆ ಮಾಡಿದ್ದ ಈ ಪೋಸ್ಟ್ ದುರದೃಷ್ಟವಶಾತ್ ಇನ್ಸ್ಟಾ ನಲ್ಲೂ ಅವರ ಕೊನೆಯ ಪೋಸ್ಟ್ ಆಗಿತ್ತು.

ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು.
ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು.
ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು.
ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.
ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ

ಚಿತ್ರದ ಕೆಳಗೆ ಈ ಸಾಲುಗಳನ್ನು ಬರೆದಿದ್ದರು ಪುನೀತ್ ರಾಜ್ಕುಮಾರ್. ಅಲ್ಲಿದ್ದ ದಿನಾಂಕ ನೋಡಿದಾಗ ನವೆಂಬರ್ 1 ರಂದು ಅಂದ್ರೆ ಕನ್ನಡ ರಾಜ್ಯೋತ್ಸವದ ದಿನ ಹೊಸದೇನನ್ನೋ ಘೋಷಣೆ ಮಾಡಲಿದ್ದಾರೆ ಎಂದು ಎಲ್ಲರಿಗೂ ಅರ್ಥವಾಯ್ತು. ಮೊದಲಿಗೆ ಎಲ್ರೂ ಇದು ಹೊಸಾ ಸಿನಿಮಾ ವಿಚಾರ, ನವೆಂಬರ್ 1ಕ್ಕೆ ಹೊಸಾ ಸಿನಿಮಾ ಟೈಟಲ್ ಹೇಳ್ತಾರೆ ಅಂದ್ಕೊಂಡಿದ್ರು. ನಂತರ ಇದು ಸಮುದ್ರದಾಳದ ವಿಚಾರ ಆಗಿರೋದ್ರಿಂದ ಬಹುಶಃ ಇದು ಅಣ್ಣಾವ್ರ ಒಂದು ಮುತ್ತಿನ ಕತೆ ಚಿತ್ರದ ಲೇಟೆಸ್ಟ್ ಅವತರಣಿಕೆ ಇರಬಹುದು ಎಂದು ಚರ್ಚೆಯಾಗಿತ್ತು. ಹಾಗಾಗಿ ಟೈಟಲ್ ಕೂಡಾ ಒಂದು ಮುತ್ತಿನ ಕತೆಯೇ ಇಡ್ತಾರೆ ಎನ್ನಲಾಗಿತ್ತು.

ಆದರೆ ಈಗ ಪುನೀತ್ ಆಪ್ತವಲಯ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಅಪ್ಪು ಕನ್ನಡ ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಉಡುಗೊರೆ ಕೊಡೋಕೆ ರೆಡಿಯಾಗಿದ್ರಂತೆ. ಅದು ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ಬರುತ್ತಿರೋ ವೈಲ್ಡ್​ಲೈಫ್ ಡಾಕ್ಯುಮೆಂಟರಿ.

ಕನ್ನಡಿಗರಿಗೆ ಅಪ್ಪು ಗಿಫ್ಟ್

ಕರ್ನಾಟಕದ ವನ್ಯಜೀವಿ ಸಂಪತ್ತಿನ ಬಗ್ಗೆ ‘Wild Karnataka’ ಎನ್ನುವ ಡಾಕ್ಯುಮೆಂಟರಿಯೊಂದನ್ನು ಈಗ ಎರಡು ವರ್ಷಗಳ ಹಿಂದೆ 2019ರಲ್ಲಿ ಅಮೋಘವರ್ಷ ಎನ್ನುವ ಖ್ಯಾತ ವೈಲ್ಡ್ ಲೈಫ್ ಫೊಟಗ್ರಫರ್ ಮಾಡಿದ್ದರು. ಅದನ್ನು ನೋಡಿ ಖುಷಿಪಟ್ಟಿದ್ದ ಪುನೀತ್ ಅವರೊಂದಿಗೆ ಸೇರಿ ಕರ್ನಾಟಕದ ಸಮುದ್ರದೊಳಗೆ ಇರುವ ವೈಲ್ಡ್​ಲೈಫ್ ಕುರಿತು ಡಾಕ್ಯುಮೆಂಟರಿ ನಿರ್ಮಾಣ ಮಾಡಿದ್ದರಂತೆ.

ಇಷ್ಟಪಟ್ಟು ಮಾಡಿದ್ದ ಪ್ರಾಜೆಕ್ಟ್

ಇದಕ್ಕಾಗಿ ಕರ್ನಾಟಕದ ಅನೇಕ ಸಮುದ್ರದಾಳಗಳಿಗೆ ಭೇಟಿ ಕೊಟ್ಟಿತ್ತು ಈ ಜೋಡಿ. ಗೋಕರ್ಣ, ಮುರಡೇಶ್ವರ, ನೇತ್ರಾಣಿ ಸೇರಿದಂತೆ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಅನೇಕ ದಿನ ಸುತ್ತಾಡಿದ್ದಾರೆ. ಸ್ಕೂಬಾ ಡೈವಿಂಗ್ ಮಾಡಿದ್ದ ಚಿತ್ರಗಳನ್ನೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ಹಂಚಿಕೊಂಡಿದ್ದರು. ಕರ್ನಾಟಕದ ವ್ಯಾಪ್ತಿಗೆ ಬರುವ ಸಮುದ್ರದ ಆಳದಲ್ಲಿರುವ ಜೀವಿಗಳನ್ನು ನಮ್ಮ ನಾಡಿನ ಜನತೆಗೆ ಜೊತೆಗೆ ಇಡೀ ಪ್ರಪಂಚಕ್ಕೆ ಪರಿಚಯಿಸೋ ವಿಶಿಷ್ಟ ಡಾಕ್ಯುಮೆಂಟರಿ ಇದಾಗಿತ್ತು ಎನ್ನಲಾಗಿದೆ. ಇದಕ್ಕೆ ‘ಗಂಧದಗುಡಿ’ ಅಥವಾ ‘ಒಂದು ಮುತ್ತಿನ ಕತೆ’ ಎನ್ನುವ ಅಣ್ಣಾವ್ರ ಚಿತ್ರದ ಹೆಸರನ್ನೇ ಇಡುತ್ತಾರೆ ಎನ್ನಲಾಗಿತ್ತು. ಆ ಶೀರ್ಷಿಕೆಯನ್ನೇ ರಾಜ್ಯೋತ್ಸವದ ದಿನ ಅಪ್ಪು ಘೋಷಣೆ ಮಾಡಲಿದ್ದರು. ತಮ್ಮದೇ ನಿರ್ಮಾಣ ಸಂಸ್ಥೆ ಪಿಆರ್​ಕೆ ಪ್ರೊಡಕ್ಷನ್ಸ್ ಮತ್ತು ಮಡ್​ಸ್ಕಿಪ್ಪರ್ ಸಂಸ್ಥೆಯ ಜೊತೆ ಸೇರಿ ಈ ಡಾಕ್ಯು-ಫಿಲ್ಮ್ ರೆಡಿ ಮಾಡಿದ್ದರು ಪುನೀತ್. ಅಜನೀಶ್ ಲೋಕನಾಥ್ ಇದಕ್ಕೆ ಸಂಗೀತ ನೀಡಿದ್ದು ಕನ್ನಡದ ಪಾಲಿಗೆ ಇದು ಮೊಟ್ಟಮೊದಲ ಮತ್ತು ಬಹಳ ವಿಶಿಷ್ಟವಾದ ಪ್ರಯತ್ನ……