ಬೆಂಗಳೂರು:
ಎಂಎಸ್ ಧೋನಿ (MS Dhoni) ಮತ್ತು ಯುವರಾಜ್ ಸಿಂಗ್ (Yuvraj Singh) ಕ್ರಿಕೆಟ್ ನ ದೊಡ್ಡ ತಾರೆಗಳು ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ ಜಾಹೀರಾತಿನ ಚಿತ್ರೀಕರಣದ ವೇಳೆ ಇಬ್ಬರೂ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಸಂತೋಷದಿಂದ ಕಾಣುತ್ತಿದ್ದರು. ಅವರ ನಡುವೆ ಮಾತುಕತೆಯೂ ನಡೆದಿದೆ. ಟೀಮ್ ಇಂಡಿಯಾದ ಈ ಮಾಜಿ ಕ್ರಿಕೆಟಿಗರ ಈ ವಿಡಿಯೋ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಧೋನಿ-ಯುವರಾಜ್ ಭೇಟಿ:
ಎಂಎಸ್ ಧೋನಿ (MS Dhoni) ಮತ್ತು ಯುವರಾಜ್ ಸಿಂಗ್ (Yuvraj Singh) ಇಬ್ಬರೂ ಕ್ರಿಕೆಟ್ ತಾರೆಯರೂ ಸಹ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಎಲ್ಲದರ ನಡುವೆಯೂ ಕ್ರಿಕೆಟ್ ಅಭಿಮಾನಿಗಳು ಮಹಿ-ಯುವಿ ಅವರನ್ನು ಒಟ್ಟಿಗೆ ನೋಡಲು ಇಷ್ಟಪಡುತ್ತಾರೆ. ಯುವಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ವಿಶ್ವಕಪ್‌ನ ಹಳೆಯ ಪಾಲುದಾರರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿರುವ ಮಹಿ-ಯುವಿ :
ಎಂಎಸ್ ಧೋನಿ ಮುಂದಿನ ವರ್ಷ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ, ಆದರೆ ಯುವರಾಜ್ ಸಿಂಗ್ ಇಂಡಿಯಾ ಲೆಜೆಂಡ್ಸ್‌ಗಾಗಿ (India Legends) ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ (Road Safety World Series) ಕಾಣಿಸಿಕೊಳ್ಳಲಿದ್ದಾರೆ…..