Breaking News

ಮದ್ವೆಗೆ ಕರೆಯದಿದ್ರೂ ತನ್ನ ಪರ್ಸನಲ್​ ಬಾಡಿಗಾರ್ಡ್​ ಕಳಿಸಿಕೊಟ್ಟ ಸಲ್ಮಾನ್​ ಖಾನ್​..!

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆಗೆ ಭದ್ರತೆ....

SHARE......LIKE......COMMENT......

ಬೆಂಗಳೂರು:

ಎಲ್ಲೆಲ್ಲೂ ಈಗ ಕತ್ರಿನಾ ಕೈಫ್(Katrina Kaif)​ ಹಾಗೂ ವಿಕ್ಕಿ ಕೌಶಲ್(Vicky Kaushal)​ ಮದುವೆಯದ್ದೆ ಸದ್ದು. ಸಿನಿಮಾ ಶೂಟಿಂಗ್​ ಮಾಡುವಾಗ ಒಂದೊಂದೆ ವಿಷಯಗಳು ಹೊರಬಂದಂತೆ, ಈ ಜೋಡಿಯ ಮದುವೆ(Marriage) ವಿಚಾರಗಳು ಒಂದೊಂದೆ ಹೊರಬಂದು ಭಾರಿ ಚರ್ಚೆ ಸೃಷ್ಠಿಸುತ್ತಿದೆ. ನಿನ್ನೆ ರಾತ್ರಿ ಈ ಜೋಡಿಯ ಮೆಹಂದಿ(Mehndi) ಶಾಸ್ತ್ರ ಅದ್ದೂರಿಯಾಗಿ ನಡೆದಿದೆ, ಕತ್ರಿನಾ ಕೈಫ್​ ಈ ಹಿಂದೆ ಸಲ್ಮಾನ್​​ ಖಾನ್(Salman Khan) ಅವರನ್ನು ಪ್ರೀತಿಸುತ್ತಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಇವರ ಮದುವೆಗೆ ಸಲ್ಮಾನ್​ ಖಾನ್​ಗೆ ಆಹ್ವಾನ ಮಾಡಲಾಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಇದು ಸುಳ್ಳಾಗಿತ್ತು. ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್ ಮದುವೆಗೆ ಬಾಲಿವುಡ್​ ಭಜರಂಗಿ ಭಾಯ್​​ಜಾನ್​​ಗೆ ಆಹ್ವಾನ ಬಂದಿಲ್ಲ. ಈ ವಿಚಾರವೂ ಭಾರೀ ವೈರಲ್​ ಆಗಿತ್ತು. ಆದರೆ, ಹಸಮಣೆ ಏರಲು ಸಜ್ಜಾದ ಬಾಲಿವುಡ್​ ಜೋಡಿ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್ ಮದುವೆಗೆ ಬಾಲಿವುಡ್ ಸಲ್ಮಾನ್​​ ಖಾನ್​ ಅವರ ವಯಕ್ತಿಕ ಬಾಡಿಗಾರ್ಡ್(Personal Bodyguard) ಗುರ್ಮಿತ್​ ಸಿಂಗ್(ಶೇರಾ) ಭದ್ರತೆ ಒದಗಿಸುತ್ತಿದ್ದಾರೆ. ರಾಜಸ್ಥಾನದ ಸಾವಿ ಮಾಧೊಪುರದಲ್ಲಿರುವ ಸಿಕ್ಸ್ ಸೆನ್ಸಸ್(Six Senses) ಪೋರ್ಟ್​ನಲ್ಲಿ ಕತ್ರಿನಾ ವಿಕ್ಕಿ ಕೌಶಲ್ ಮದುವೆ ನಾಳೆ ನಡೆಯಲಿದೆ.

ಪರ್ಸನಲ್​ ಬಾಡಿಗಾರ್ಡ್​ ಕಳಿಸಿಕೊಟ್ಟ ಸಲ್ಮಾನ್ ಖಾನ್​!

ಈ ಎಲ್ಲಾ ಕಾರ್ಯಕ್ರಮಗಳಿಗೆ ನಟ ಸಲ್ಮಾನ್​ ಖಾನ್ ವಯಕ್ತಿಕ ಬಾಡಿಗಾರ್ಡ್​ ಸೆಕ್ಯುರಿಟಿ ನೀಡಲಿದ್ದಾರೆ. ಶೇರಾ ತಮ್ಮದೇ ಆದ ಸೆಕ್ಯುರಿಟಿ ತಂಡವನ್ನು ಹೊಂದಿದ್ದಾರೆ. ಆ ಮೂಲಕ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆಗೆ ಭದ್ರತೆ ನೀಡುತ್ತಿದ್ದಾರೆ. ಇದರ ಜತೆಗೆ ಡಿ.9ರವರೆಗೆ ವಿವಾಹ ನಡೆಯುವ ಸ್ಥಳದ ಸುತ್ತಮುತ್ತ ಭದ್ರತೆ ಒದಗಿಸಲಾಗಿದೆ. ಕತ್ರಿನಾ ವಿಕ್ಕಿ ಮದುವೆಗೆ 120 ಜನರನ್ನು ಮಾತ್ರ ಆಹ್ವಾನಿಸಲಾಗಿದೆ. ಮದುವೆಯ ಬಳಿಕ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕತ್ರಿನಾ ಕೈಫ್ ಹಾಗೂ ಅವರ ಕುಟುಂಬ ಸಲ್ಮಾನ್​ ಖಾನ್​ ಜತೆ ಉತ್ತಮ ಬಾಂದವ್ಯ ಹೊಂದಿದ್ದಾರೆ. ಆದರೂ ತಮಗೆ ಮದುವೆಗೆ ಆಹ್ವಾನ ನೀಡಲಿಲ್ಲ ಎಂದು ಸಲ್ಮಾನ್​ ಸಹೋದರಿ ಅರ್ಪಿತಾ ಆರೋಪಿಸಿದ್ದಾರೆ.

ಕೋಡ್​ ಇದ್ರೆ ಮಾತ್ರ ಒಳಗೆ ಎಂಟ್ರಿ!

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಬರೆದು ನೀಡುವುದನ್ನು ನೋಡಿದ್ದೇವೆ. ಆದರೆ ಕೋಡ್​ ಕೊಟ್ಟಿರುವುದನ್ನು ಕೇಳಿದ್ದೀರ. ಚಾನ್ಸ್​ ಇಲ್ಲ, ಕೇವಲ ಬಾಂಡ್ ಸಿನಿಮಾಗಳು ಈ ರೀತಿಯ ಕೋಡ್​ಗಳನ್ನು ನೋಡಿದ್ದೀರ. ಆದರೆ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕೋಡ್ ನೀಡಲಾಗಿದೆಯಂತೆ. ಕತ್ರಿನಾ ಮತ್ತು ವಿಕ್ಕಿ ಮದುವೆ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರ ಬರುತ್ತಿದೆ. ಈ ಕೋಡ್​ ತೋರಿಸಿದರೆ ಮಾತ್ರ ಅವರ ಮದುವೆಗೆ ಎಂಟ್ರಿ ನೀಡಲಾಗುತ್ತಂತೆ…..