ಟಾಲಿವುಡ್:
ಸಮಂತಾ ಟಾಲಿವುಡ್ ನ ಪರಮ ಸುಂದರಿ, ಗ್ಲಾಮರ್ ಲುಕ್, ಸ್ಟೈಲಿಶ್ ಕಾಸ್ಟ್ಯೂಮ್ನಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಚೆಲುವೆ. ನಾಗಾಚೈತನ್ಯ ಜೊತೆ ಡಿವೋರ್ಸ್ ಆದ್ದ ಬಳಿಕ ಮತ್ತಷ್ಟು ಸೆಕ್ಸಿ ಆಗಿ ಕಾಣಿಸಿಕೊಳ್ತಾದ್ದಾರೆ ಸಮಂತಾ. ಇಷ್ಟು ದಿನ ಕಥೆ ಹಾಗೂ ಪಾತ್ರಗಳಲ್ಲಿ ಚ್ಯೂಸಿ ಆಗಿದ್ದ ಸ್ಯಾಮ್, ಅದ್ಯಾವಾಗ ಚೈ ಜೊತೆ ವಿಚ್ಛೇದನ ಪಡದುಕೊಂಡ್ರೋ ನೋಡಿ, ಅಲ್ಲಿಂದ ಬಿಚ್ಚಮ್ಮ ಆಗಿದ್ದಾರೆ. ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್ಗೆ ಹೆಜ್ಜೆ ಹಾಕೋಕೆ ರೆಡಿಯಾಗಿರೋ ಸಮಂತಾ. ಹಾಲಿವುಡ್ ಸಿನಿಮಾಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬ್ರಿಟಿಷ್ ನಿರ್ದೇಶಕ ಫಿಲಿಪ್ ಜಾನ್ ಆ್ಯಕ್ಷನ್ ಕಟ್ ಹೇಳ್ತಿರೋ ‘ಅರೇಂಜ್ಮೆಂಟ್ಸ್ ಆಫ್ ಲವ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಯೆಸ್ ಡಿಟೆಕ್ಟೀವ್ ಏಜೆನ್ಸಿ ನಡೆಸುವ ತಮಿಳು ದ್ವಿಲಿಂಗಿ ಮಹಿಳೆಯಾಗಿ ಸಮಂತಾ ಬಣ್ಣ ಹಚ್ಚಲಿದ್ದಾರೆ. ಇದೇ ಮೊದಲ ಬಾರಿಗೆ ಸಮಂತಾ ಇತರ ಪಾತ್ರಗಳಲ್ಲಿ ನಟಿಸುತ್ತಿರುವುದು ವಿಶೇಷ…..