Breaking News

ಹೋಟೆಲ್ ಫುಡ್ ಬೆಲೆ ಏರಿಕೆ ಬೆನ್ನಲ್ಲೇ ಆಟೋ ದರದಲ್ಲಿಯೂ ಹೆಚ್ಚಳ..!

ಡಿಸೆಂಬರ್ 1ರಿಂದ ಹೊಸ ದರ ಅನ್ವಯ....

SHARE......LIKE......COMMENT......

ಬೆಂಗಳೂರು:

ಇವತ್ತು ಬೆಂಗಳೂರಿನ ಜನತೆಗೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ.ಇಂದು ಬೆಳಗ್ಗೆ ಹೋಟೆಲ್ ಫುಡ್ ಮೇಲೆ ಬೆಲೆ ಏರಿಕೆ ಅರಗಿಸಿಕೊಳ್ಳುವ ಮುನ್ನವೇ ಆಟೋ ದರ ಹೆಚ್ಚಿಸಿ, ಸಾರಿಗೆ ಪ್ರಾಧಿಕಾರ ಆದೇಶ ಪ್ರಕಟಿಸಿದೆ, ಸಾರಿಗೆ ಪ್ರಾಧಿಕಾರ ಪರಿಷ್ಕೃತ ಆಟೋ ದರವನ್ನು ಸಹ ನಿಗದಿಪಡಿಸಿದೆ.

ಡಿಸೆಂಬರ್ 1ರಿಂದ ಹೊಸ ದರ ಅನ್ವಯವಾಗಲಿದೆ. ಹೊಸ ದರಕ್ಕೆ ತಕ್ಕಂತೆ 90 ದಿನಗಳೊಳಗಾಗಿ ಮೀಟರ್ ಬದಲಿಸಿಕೊಳ್ಳಲು ಆಟೋ ಚಾಲಕರಿಗೆ ಅವಕಾಶ ನೀಡಲಾಗಿದೆ. ಕೊರೊನಾ ಹಿನ್ನೆಲೆ ಬಹುತೇಕ ಆಟೋ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹಾಗಾಗಿ ದರವನ್ನು ಹೆಚ್ಚಿಸಬೇಕೆಂದು ಆಟೋ ಚಾಲಕರು ಆಗ್ರಹಿಸಿದ್ದರು.

ಹೊಸ ದರಗಳ ವಿವರ ಹೀಗಿದೆ: ಮೊದಲ 2 kmಗೆ 30 ರೂಪಾಯಿ ನಿಗದಿ ಮಾಡಲಾಗಿದೆ. ನಂತರದ ಪ್ರತಿ km ಗೆ 15 ರೂಪಾಯಿ ಏರಿಕೆಯಾಗುತ್ತದೆ. ಮೊದಲ ಐದು ನಿಮಿಷ ಕಾಯುವಿಕೆ ಉಚಿತವಾಗಿರಲಿದೆ. ಐದು ‌ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ. ಚಾರ್ಜ್ ಮಾಡಲಾಗುತ್ತದೆ. 20 kg ವರೆಗೆ ಲಗೇಜ್ ಸಾಗಣೆ ಉಚಿತವಾಗಿರಲಿದ್ದು, 21 kg ಇಂದ‌ 50 kg ವರೆಗೆ 5 ರೂ. ದರ ನಿಗದಿ ಮಾಡಲಾಗಿದೆ. ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15) ಮಾಡಲಾಗಿದೆ. ಸಾರಿಗೆ ಪ್ರಾಧಿಕಾರದ ಆದೇಶವನ್ನು ಆಟೋ ಚಾಲಕರು ಸ್ವಾಗತಿಸಿದ್ದಾರೆ……