Breaking News

Omicron ನಿಂದ Petrol-Diesel ಬೆಲೆ ಇಳಿಕೆ ಸಾಧ್ಯತೆ..!

ಪೆಟ್ರೋಲ್ ಐದು ರೂಪಾಯಿ ಕಡಿಮೆ ಆಗುವ ನಿರೀಕ್ಷೆ....

SHARE......LIKE......COMMENT......

ನವದೆಹಲಿ:

ಕೊರೊನಾ ವೈರಸ್‌ನ (Coronavirus) ಹೊಸ ರೂಪಾಂತರಿ (New Variant) ಓಮಿಕ್ರಾನ್‌ನಿಂದ (Omicron) ಇಡೀ ವಿಶ್ವವೇ ಭೀತಿಗೋಳಗಗಿದೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವೈರಸ್ ಪ್ರಕರಣಗಳು ವರದಿಯಾದ ನಂತರ ಭಾರತ ಸೇರಿದಂತೆ ಹಲವು ದೇಶಗಳು ಅಲರ್ಟ್ ಆಗಿವೆ. ಆದರೆ ಒಂದೆಡೆ ವೈರಸ್‌ (Covid-18) ಭೀತಿ ಎದುರಾಗಿದ್ದರೆ ಮತ್ತೊಂದೆಡೆ ನೆಮ್ಮದಿಯ ಸುದ್ದಿಯೊಂದು ಕೂಡ ಪ್ರಕಟವಾಗಿದೆ. ವೈರಸ್‌ನಿಂದಾಗಿ ವಿಶ್ವಾದ್ಯಂತ ಹೆಚ್ಚುತ್ತಿರುವ ನಿರ್ಬಂಧನೆಗಳ ಕಾರಣ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೀಗ ವ್ಯಕ್ತವಾಗತೊಡಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುತ್ತಾ?

‘ಹಿಂದೂಸ್ತಾನ’ನಲ್ಲಿ ಪ್ರಕಟಗೊಂಡ ಸುದ್ದಿ ಪ್ರಕಾರ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 5 ರೂ.ವರೆಗೆ ಕಡಿಮೆಯಾಗಬಹುದು ಎನ್ನಲಾಗಿದೆ. ಜಾಗತಿಕವಾಗಿ, ವೈರಸ್‌ನ ಭಯವು ಕಚ್ಚಾ ತೈಲದ ಬೆಲೆಯಲ್ಲಿ (Crude Oil Price Drop) ಇಳಿಕೆಗೆ ಕಾರಣವಾಗಲಿದೆ ಎಂದು ಇಂಧನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಈ ಆಧಾರದ ಮೇಲೆ ಡಿಸೆಂಬರ್ 1 ರಿಂದ ಬಿಡುಗಡೆಯಾಗುವ ಹೊಸ ದರದಲ್ಲಿ ಕಡಿತ ನಿರೀಕ್ಷಿಸಬಹುದು ಎನ್ನಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಬೆಲೆ ಇಳಿಕೆಯಾಗಿದ್ದು, ಇನ್ಮುಂದೆ ಭಾರತದಲ್ಲೂ ವಾಣಿಜ್ಯ ಹಾಗೂ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ (LPG Price Drop) ಬೆಲೆ ಕಡಿಮೆಯಾಗಬಹುದು.

ಜಾಗತಿಕ ನಿರ್ಬಂಧಗಳು ಪರಿಣಾಮ ಬೀರಲಿವೆ

ಹೊಸ ರೂಪಾಂತರಿ Omicron ಪರಿಣಾಮವು ಭವಿಷ್ಯದಲ್ಲಿ ಹೆಚ್ಚಾದರೆ, ನಂತರ ನಿರ್ಬಂಧಗಳು ವಿಶ್ವಾದ್ಯಂತ ಹೆಚ್ಚಾಗಲಿವೆ. ಇದು ಕಚ್ಚಾ ತೈಲದ ಬೇಡಿಕೆಯ ಮೇಲೂ ಪರಿಣಾಮ ಬೀರಲಿದೆ ಮತ್ತು ಅವುಗಳ ದರಗಳನ್ನು ಇಳಿಸಲಿದೆ. ಅಲ್ಲದೆ ಡಿಸೆಂಬರ್ 2ರಂದು ನಡೆಯಲಿರುವ OPEC ರಾಷ್ಟ್ರಗಳ ಉದ್ದೇಶಿತ ಸಭೆಯಲ್ಲಿ ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸುವ ಕುರಿತು ನಿರ್ಧಾರ ಹೊರಬೀಳುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಕಚ್ಚಾ ತೈಲದ ಪೂರೈಕೆಯು ಹೆಚ್ಚು ಮತ್ತು ಬೇಡಿಕೆಯು ಕಡಿಮೆಯಾಗಿರುತ್ತದೆ, ಇದರಿಂದಾಗಿ ಬೆಲೆಗಳು ಕುಸಿಯಲಿವೆ. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $ 72 ರಷ್ಟಿದ್ದರೂ ಸಹ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ಸುಮಾರು 5 ರೂಪಾಯಿಗಳಷ್ಟು ಅಗ್ಗವಾಗಬಹುದು…..