Breaking News

ಇಂದಿನಿಂದ ಹೋಟೆಲ್,ರೆಸ್ಸೋರೆಂಟ್ ಗಳಲ್ಲಿ ಬೆಲೆ ಏರಿಕೆ..!

ಶೇ.5 ರಿಂದ ಶೇ.10ವರೆಗೆ ಬೆಲೆ ಏರಿಕೆ ಮಾಡಲಾಗುತ್ತಿದೆ....

SHARE......LIKE......COMMENT......

ಬೆಂಗಳೂರು:

ಅಡುಗೆ ಸಾಮಾಗ್ರಿಗಳು ಬೆಲೆ ಏರಿಕೆ ಹಿನ್ನೆಲೆ ಇಂದಿನಿಂದ ಬೆಂಗಳೂರಿನನ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಆಹಾರದ ಬೆಲೆ ಏರಿಕೆ ಮಾಡಲಾಗುತ್ತಿದೆ, ಬಹುತೇಕ ಹೋಟೆಲ್ ಗಳಲ್ಲಿ ಕಂಪ್ಯೂಟರೈಸ್ಡ್ ಬಿಲ್ಲಿಂಗ್ ವ್ಯವಸ್ಥೆ ಇರೋ ಹಿನ್ನೆಲೆ ಹೊಸ ದರ ಪಟ್ಟಿ ಅಳವಡಿಸಿಕೊಳ್ಳಲು ಮಾಲೀಕರಿಗೆ ಗುರುವಾರದವರೆಗೆ ಸಮಯಾವಕಾಶ ನೀಡಲಾಗಿದೆ.

ಬೆಲೆ ಏರಿಕೆ ಕುರಿತು ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಮಾತನಾಡಿದ್ದು, ದರ ಎಷ್ಟು ಏರಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ, ಇಂದಿನಿಂದ ನಗರದ ಬಹುತೇಕ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಹೊಸ ದರವೇ ಅನ್ವಯವಾಗಲಿದೆ. ಅಡುಗೆ ಸಾಮಾಗ್ರಿ ಸೇರಿದಂತೆ ಇನ್ನಿತರ ಬೆಲೆಗಳಲ್ಲಿ ಏರಿಕೆಯಾಗಿರುವ ಹಿನ್ನೆಲೆ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಶೇ.5 ರಿಂದ ಶೇ.10ವರೆಗೆ ಬೆಲೆ ಏರಿಕೆ ಮಾಡಲು ಹೋಟೆಲ್ ಉದ್ಯಮಿಗಳು ನಿರ್ಧರಿಸಿದ್ದಾರೆ. ದೋಸೆ, ರೈಸ್ ಬಾತ್ ದರವನ್ನು 5% ರಷ್ಟು, ಊಟ, ಇತರೆ ಚೈನೀಸ್ ಪದಾರ್ಥಗಳ ಬೆಲೆ ಶೇ.10 ರಷ್ಟು ಏರಿಕೆ ಮಾಡಲಾಗುತ್ತಿದೆ. ಇನ್ನೂ ಕಾಫಿ ಮತ್ತು ಟೀ ಬೆಲೆ ಸಹ 2 ರೂಪಾಯಿ ಏರಿಕೆ ಆಗಲಿದೆ.

ಇತ್ತೀಚೆಗೆ ಬಳಸುವ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 1,000 ರೂಪಾಯಿಯಿಂದ 2 ಸಾವಿರ ರೂಪಾಯಿ ಗಡಿ ಮುಟ್ಟಿದೆ. ಹೀಗಾಗಿ ಹೋಟೆಲ್ ಆಹಾರ ಬೆಲೆ ಏರಿಕೆ ಅನಿವಾರ್ಯವಾಗಿದೆ ಅಂತಾರೆ ಹೋಟೆಲ್ ಉದ್ಯಮಿಗಳು. ಇತ್ತ ಬೆಲೆ ಏರಿಕೆಗೆ ಹೋಟೆಲ್ ಗ್ರಾಹಕರು ಬೇಸರ ಹೊರ ಹಾಕಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಯ್ತು ಅನ್ನೋ ಸಂತೋಷದಲ್ಲಿದ್ದ ನಮಗೆ ಹೋಟೆಲ್ ಆಹಾರದ ಬೆಲೆ ಏರಿಕೆ ಶಾಕ್ ನೀಡಿದೆ. ಹೋಟೆಲ್ ಮೇಲೆ ಅವಲಂಬಿತರಾದ ನಮಗೆ ದಿನಕ್ಕೆ 30 ರಿಂದ 50 ರೂ.ವರೆಗೂ ಹೊರೆಯಾಗಲಿದೆ ಎಂದು ಗ್ರಾಹಕರೊಬ್ಬರು ಹೇಳುತ್ತಾರೆ……