Breaking News

ಇಂದು ಅಪ್ಪು ಪುಣ್ಯತಿಥಿ: ಮಧ್ಯಾಹ್ನ 12ರ ವರೆಗೂ ದರ್ಶನಕ್ಕೆ ಅವಕಾಶವಿಲ್ಲ..!

ಎಲ್ಲ ಕಾರ್ಯಗಳು ಮುಗಿದ ಬಳಿಕ ದರ್ಶನಕ್ಕೆ ಅವಕಾಶ....

SHARE......LIKE......COMMENT......

ಬೆಂಗಳೂರು:

ಮಳೆಯೇ ಇರಲಿ.. ಬಿಸಿಲೇ ಇರಲಿ.. ಯಾವುದನ್ನು ಲೆಕ್ಕಿಸದೆ ಅಪ್ಪು ಸಮಾಧಿಗೆ ಅಭಿಮಾನಿಗಳು ಬಂದು ನಮನ ಸಲ್ಲಿಸುತ್ತಿದ್ದಾರೆ. ಅಪ್ಪು(Appu) ನಮ್ಮನ್ನೆಲ್ಲ ಬಿಟ್ಟು ಹೋಗಿ ಇಂದಿಗೆ 11ನೇ ದಿನ. ಆದರೂ ಅವರ ಅಭಿಮಾನಿಗಳ ನೋವು(Pain) ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಪ್ರತಿದಿನ ಅಪ್ಪು ಸಮಾಧಿ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿ(Fans)ಗಳು ಆಗಮಿಸುತ್ತಿದ್ದಾರೆ. ಇಂದು ಡಾ ರಾಜ್‌ಕುಮಾರ್‌ ಕುಟುಂಬದಿಂದ(Dr Rajkumar Family) ನಟ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ 11ನೇ ದಿನದ ತಿಥಿ ಕಾರ್ಯ ನಡೆಯಲಿದೆ. ಬೆಳಗ್ಗೆ ಪುನೀತ್‌ ಅವರ ಮನೆಯಲ್ಲಿ ಶಾಸೊತ್ರೕಕ್ತವಾಗಿ ಪೂಜೆ ನಡೆದಿದೆ. ನಂತರ ಇಡೀ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರುವ(Kanteerava Studios) ಪುನೀತ್‌ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ತಿಥಿ ಕಾರ್ಯ ಮಾಡಲಿದ್ದಾರೆ. ಹೀಗಾಗಿ ಇಂದು ಮಧ್ಯಾಹ್ನದ ವರೆಗೂ ಅಪ್ಪು ಸಮಾಧಿಗೆ ಭೇಟಿ ನೀಡಲು ಅಭಿಮಾನಿಗಳಿಗೆ ಅವಕಾಶವಿಲ್ಲ. ನಿನ್ನೆ ಭಾನುವಾರ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಅಭಿಮಾನಿಗಳು ಬಂದು ಅಪ್ಪು ಸಮಾಧಿಗೆ ನಮನ ಸಲ್ಲಿಸಿದ್ದಾರೆ.

ಮಧ್ಯಾಹ್ನ 12ರವರೆಗೆ ಅಭಿಮಾನಿಗಳಿಗೆ ನೋ ಎಂಟ್ರಿ

ಅಪ್ಪು ನಿಧನದ ಬಳಿಕ ಕೆಲವು ಅಭಿಮಾನಿಗಳಿಗೆ ಬಹಳ ಬೇಸರವಾಗಿದೆ. ಇಂದು 11ನೇ ದಿನದ ಪುಣ್ಯಸ್ಮರಣೆ ಇರುವುದರಿಂದ ಫ್ಯಾನ್ಸ್​ ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದರಿಂದ ಕುಟುಂಬದವರ ಕಾರ್ಯಕ್ಕೆ ತೊಂದರೆ ಆಗಬಾರದು. ಹೀಗಾಗಿ ಅಪ್ಪು ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ನೀಡಿಲ್ಲ. ಎಲ್ಲ ಕಾರ್ಯಗಳು ಮುಗಿದ ಬಳಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ಈಗಾಗಲೇ ಅಭಿಮಾನಿಗಳು ಮುಂಜಾನೆಯಿಂದ ಆಗಮಿಸಿ, ಕ್ಯೂನಲ್ಲಿ ನಿಂತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಸಮಾಧಿ ಬಳಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

12 ಗಂಟೆ ಬಳಿಕ ಮತ್ತೆ ದರ್ಶನಕ್ಕೆ ಅವಕಾಶ

ಪುನೀತ್​ ರಾಜ್​ಕುಮಾರ್​ ಕುಟುಂಬದವರು ಹಾಲು-ತುಪ್ಪ ಕಾರ್ಯ ನೆರವೇರಿಸಿದ ಬಳಿಕ ಅಪ್ಪು ಸಮಾಧಿ ದರ್ಶನಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಡಲಾಗುವುದು. ಅಂದಿನಿಂದ ಇಂದಿನವರೆಗೆ ಪ್ರತಿ ದಿನ 20 ಸಾವಿರಕ್ಕೂ ಅಧಿಕ ಅಭಿಮಾನಿಗಳು ಸಮಾಧಿ ಬಳಿ ಬಂದು ನಮನ ಸಲ್ಲಿಸುತ್ತಿದ್ದಾರೆ. ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಅಪ್ಪು ಸಮಾಧಿ ದರ್ಶನ ಮಾಡುತ್ತಿದ್ದಾರೆ. ಆದರೆ ಇಂದು ಪುನೀತ್​ ರಾಜ್​ಕುಮಾರ್​ ಕುಟುಂಬದವರು 11ನೇ ದಿನದ ಕಾರ್ಯ ನೆರವೇರಿಸುತ್ತಿರುವ ಕಾರಣದಿಂದ ಬೆಳಗ್ಗೆ ಸಮಾಧಿ ಬಳಿ ಅಭಿಮಾನಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕುಟುಂಬದವರು ಕಾರ್ಯ ಮುಗಿಸಿದ ಬಳಿಕ, ಅಂದರೆ 12 ಗಂಟೆ ನಂತರ ಅಭಿಮಾನಿಗಳಿಗೆ ಎಂಟ್ರಿ ನೀಡಲಾಗುವುದು.

ಕುಟುಂಬಸ್ಥರು, ಆಪ್ತರಿಗೆ ಮಾತ್ರ ಪ್ರವೇಶ

ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿದ ಕ್ಷಣದಿಂದಲೂ ಎಲ್ಲವನ್ನೂ ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ. ಎಲ್ಲಿಯೂ ಗೊಂದಲಕ್ಕೆ ಎಡೆಮಾಡಿಕೊಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದೇ ರೀತಿ ಇಂದು ಕೂಡ 11ನೇ ದಿನದ ಕಾರ್ಯವನ್ನು ಕುಟುಂಬದವರು ನೆರವೇರಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಪುನೀತ್​ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಕಾರ್ಯ ನಡೆದಿದೆ. ಪುನೀತ್​ ಅವರಿಗೆ ಇಷ್ಟವಾದ ತಿಂಡಿ-ತಿನಿಸುಗಳನ್ನು ಸಮಾಧಿ ಮುಂದೆ ಇಟ್ಟು ಪೂಜೆ ಮಾಡಲಾಗುತ್ತದೆ. ಈ ಕಾರ್ಯಕ್ಕೆ ಕುಟುಂಬದವರ ಜೊತೆ ಕೆಲವೇ ಕೆಲವು ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.

ನಾಳೆ ಅರಮನೆ ಮೈದಾನದಲ್ಲಿ ಅನ್ನ ಸಂತರ್ಪಣೆ

ಇನ್ನೂ ನಾಳೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ತಿಥಿ ಕಾರ್ಯದ ಅಂಗವಾಗಿ ಅನ್ನ ಸಂತರ್ಪಣೆ ನಡೆಯಲಿದೆ. ಈ ಕಾರ್ಯದಲ್ಲಿ ಚಿತ್ರರಂಗದವರು, ಸಾರ್ವಜನಿಕರು, ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರು ಪಾಲ್ಗೊಳ್ಳಲಿದ್ದಾರೆ……