ಬೆಂಗಳೂರು:
ಒಮಿಕ್ರೋನ್ ಆರ್ಭಟದ ಬಗ್ಗೆ WHO ವಾರ್ನಿಂಗ್ ಕೊಡುತ್ತಿದ್ದಂತೆ, ರಾಜ್ಯ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ತಜ್ಞರು ಹಿರಿಯ ಅಧಿಕಾರಿಗಳ ಜತೆ ಸುದೀರ್ಘ ಸಮಾಲೋಚನೆ ನಡೆಸುತ್ತಿದ್ದು ಸಚಿವ ಡಾ.K.ಸುಧಾಕರ್ ಇಂದು ಚರ್ಚೆ ನಡೆಸಲಿದ್ದಾರೆ. ಇಂದು ಸುಮಾರು 7 ಗಂಟೆಗಳ ಕಾಲ ನಡೆಯುವ ಮಹತ್ವದ ಮೀಟಿಂಗ್ ಕೊರೋನಾ ಒಮಿಕ್ರೋನ್ ವೈರಸ್ ಕಂಟ್ರೋಲ್ಗೆ ಏನೇನ್ ಕ್ರಮಗಳನ್ನು ಕೈಗೊಳ್ಳಬೇಕು ಯಾವುದಕ್ಕೆ ನಿರ್ಬಂಧ ಯಾವುದೆಲ್ಲಾ ಫುಲ್ ಕ್ಲೋಸ್ ಹಾಗೂ ಸಿಎಂಗೆ ಏನೇನ್ ಸಲಹೆ ಕೊಡಬೇಕು ಅನ್ನೋ ಬಗ್ಗೆ ಡಿಸೈಡ್ ಆಗಲಿದೆ ಒಟ್ಟಿನಲ್ಲಿ ಒಮಿಕ್ರೋನ್ ವೈರಸ್ ವಿಶ್ವದ ಹಲವೆಡೆ ಕಾಣಿಸಿಕೊಳ್ತಾ ಇದ್ದಂತೆ ರಾಜ್ಯಕ್ಕೆ ಬಂದ ದಕ್ಷಿಣ ಆಫ್ರಿಕಾ ವ್ಯಕ್ತಿಯಲ್ಲಿ ವಿಭಿನ್ನ ಲಕ್ಷಣಗಳು ಪತ್ತೆಯಾಗಿದೆ. ಇದರ ಬೆನ್ನಲ್ಲೆೇ ಆರೋಗ್ಯ ಇಲಾಖೆ ಮತ್ತಷ್ಟು ಟಫ್ ರೊಲ್ಸ್ ಹಾಗೂ ಇಂದು ಸಂಜೆಯೇ ಹೊಸ ಗೈಡ್ಲೈನ್ ರಿಲೀಸ್ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ…..