Breaking News

ಡಿಸೆಂಬರ್ 10ಕ್ಕೆ ಅವತಾರ ಪುರುಷನ ಕಾಮಿಡಿ ಶುರು..!

ಪ್ರೇಕ್ಷಕರಿಗೆ ಮಸ್ತ್ ಕಾಮಿಡಿಯ ಬಾಡೂಟ....

SHARE......LIKE......COMMENT......

ಸಿನಿಮಾ:

ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಅವತಾರ ಪುರುಷ ಸಿನಿಮಾ ಇದೇ ಡಿಸೆಂಬರ್ 10ಕ್ಕೆ ರಿಲೀಸ್ ಆಗಲಿದೆ ಚಿತ್ರದಲ್ಲಿ ಶರಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಶರಣ್ ಗೆ ಜೋಡಿ ಆಗಿ ಪಟಾಕಿ ಪೋರಿ ಆಶಿಕಾ ರಂಗನಾಥ್ ಸಾಥ್ ನೀಡಿದ್ದಾರೆ. ಇನ್ನುಈ ಹಿಟ್ ಪೇರ್ ನ ಎರಡನೇ ಸಿನಿಮಾ ಇದಾಗಿದ್ದು ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದೆ, ಈ ಸಿನಿಮಾಗೆ ಪು‍ಷ್ಕರ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದರೆ,ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಬಿಷ್ತ ಎಂಬ ಮಾಂತ್ರಿಕನ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೆಯೇ ಈ ಚಿತ್ರದಲ್ಲಿ ಶರಣ್ ಜೊತೆ ಶರಣ್ ಪುತ್ರಿ ಪುಣ್ಯ ಕೂಡ ಅಭಿನಯಿಸುತ್ತಿದ್ದು ಸಾಯಿಕುಮಾರ್, ಸುಧಾರಾಣಿ, ಭವ್ಯಾ ಮುಂತಾದವರುಗಳ ಬಿಗ್ ಸ್ಟಾರ್ ಕ್ಯಾಸ್ಟ್ ಕಾಣಬಹುದು. ಚಿತ್ರದ ಹೆಸರಿಗೆ ತಕ್ಕಂತೆ ಚಿತ್ರದಲ್ಲಿ ಶರಣ್ ರ ವಿವಿಧ ಕಾಮಿಡಿ ಅವತಾರಗಳು ಪ್ರೇಕ್ಷಕರಿಗೆ ಮಸ್ತ್ ಕಾಮಿಡಿಯ ಬಾಡೂಟ ಬಡಿಸೋದು ಗ್ಯಾರೆಂಟಿ……