ಬೆಂಗಳೂರು:
ಪುನೀತ್ ರಾಜ್ ಕುಮಾರ್ ಆತ್ಮ ಸಂತೋಷದಿಂದರಬೇಕೆಂದರೆ ಅವರು ಮಾಡುತ್ತಿದ್ದ ಪ್ರತಿಯೊಂದು ಒಳ್ಳೆಯ ವಿಷಯವನ್ನೂ ಮುಂದುವರೆಸಬೇಕು. ನಾನು ನನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ಸಹಾಯ ಮಾಡುತ್ತೇನೆ ಎಂದು ತಮಿಳು ನಟ ವಿಶಾಲ್ ತಿಳಿಸಿದ್ದಾರೆ.
ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶಾಲ್ ಅವರು ನಾನು ಹುಟ್ಟಿದ ದಿನವೇ ಪುನೀತ್ ಇನ್ನಿಲ್ಲ ಎಂಬ ಸುದ್ದಿ ಬಂದಿತ್ತು. ನನಗೆ ಪುನೀತ್ ಇಲ್ಲ ಅನ್ನೋ ವಿಷಯವನ್ನು 2 ದಿನ ನಂಬಲಾಗಲಿಲ್ಲ. ಪುನೀತ್ ರಾಜ್ ಕುಮಾರ್ ಅವರು ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದರು. ನಾನು ಇನ್ನು ಮುಂದೆ ಆ ಮಕ್ಕಳ ವಿದ್ಯಾಭ್ಯಾಸ ಜವಾಬ್ದಾರಿಯನ್ನು ಹೊರುತ್ತೇನೆ. ನಾನು ಇದನ್ನು ಪ್ರಚಾರಕ್ಕಾಗಿ ಮಾಡುತ್ತಿಲ್ಲ. ನಿಜ ಹೇಳಬೇಕೆಂದರೆ ನನಗೆ ಸ್ವಂತ ಮನೆ ಇಲ್ಲ, ಮನೆ ತೆಗೆದುಕೊಳ್ಳಲು ಹಣ ಕೂಡಿಟ್ಟಿದ್ದೆ, ಆ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುತ್ತಿದ್ದೇನೆ. ಇದಕ್ಕೆ ರಾಜ್ ಕುಮಾರ್ ಕುಟುಂಬಸ್ಥರು ಅವಕಾಶ ನೀಡಬೇಕು ವಿಶಾಲ್ ತಿಳಿಸಿದರು.
ಮಕ್ಕಳ ವಿದ್ಯಾಭ್ಯಾಸ ಮುಖ್ಯ. ಪುನೀತ್ ಅವರು ಯಾರಿಗೂ ಹೇಳದೆ ಎಷ್ಟೋ ಜನರಿಗೆ ಸಹಾಯ ಮಾಡಿದ್ದರು. ಅವರು ಮೃತಪಟ್ಟ ಬಳಿಕ ಈ ವಿಷಯಗಳೆಲ್ಲಾ ಜನರಿಗೆ ತಿಳಿಯುತ್ತಿವೆ. ಇಂತಹ ವ್ಯಕ್ತಿಯನ್ನು ಎಷ್ಟು ವರ್ಷಗಳಾದರೂ ಜನರು ಮರೆಯುವುದಿಲ್ಲ. ಪುನೀತ್ ರಾಜ್ ಕುಮಾರ್ ಆತ್ಮ ಸಂತೋಷದಿಂದರಬೇಕೆಂದರೆ ಅವರು ಮಾಡುತ್ತಿದ್ದ ಪ್ರತಿಯೊಂದು ಒಳ್ಳೆಯ ವಿಷಯವನ್ನೂ ಮುಂದುವರೆಸಬೇಕು. ನಾನು ನನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ಸಹಾಯ ಮಾಡುತ್ತೇನೆ ಎಂದು ಹೇಳಿದರು……