Breaking News

ಅಕ್ವೇರಿಯಂ, ಸಾಕು ಹಕ್ಕಿಗಳು ಮನೆಯಲ್ಲಿ ಇರಬಹುದೇ..?

SHARE......LIKE......COMMENT......

ವಾಸ್ತು ಟಿಪ್ಸ್:

*ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು, ಗಾಜಿನ ಗಿಂಡಿಗಳನ್ನು ಮಲಗುವ
ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತಾ, ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪುವ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭ ಲಕ್ಷಣವಾಗುವುದಿಲ್ಲ.

*ಜೊತೆಗೆ ಮಲಗುವ ಕೋಣೆಯಲ್ಲಿ ನೀರನ್ನು ತುಂಬಿಕೊಂಡ ಯಾವುದೇ ಪಾತ್ರೆಗಳು, ತೊಟ್ಟಿಗಳು, ಜಾಡಿಗಳು, ಗಿಂಡಿಗಳು ಅಶುಭಸೂಚಕವಾಗಿದೆ. ಇದಕ್ಕೆ ಕಾರಣ ಮಲಗಿರುವ ಸಂದರ್ಭದ ಸುಪ್ತಾವಸ್ಥೆಗೂ ನೀರಿನ ಕಾರಣವಾದ ಜಲತತ್ವಕ್ಕೂ ಒಂದು ಇನ್ನೊಂದನ್ನು ಭೇದಿಸಿ ಅಶುಭ ಸ್ಪಂದನಗಳನ್ನು ಮನೆಯ ಯಜಮಾನನಿಗೆ ತಂದಿಡುವ ಅಂಶಗಳಾಗಿವೆ.

*ಅಕ್ವೇರಿಯಂ ಜಾಡಿಯನ್ನು ಹೊರ ದಿವಾನಖಾನೆಯಲ್ಲಿ ಇರಿಸಬಹುದು. ಹೊಸದಾಗಿ ಮದುವೆಯಾದ ದಂಪತಿಗೆ
ಕೂಡಾ ಈ ರೀತಿಯ ಅಕ್ವೇರಿಯಂ ಜೋಡಣೆ ಉತ್ತಮ. ಮದುವೆಯಾಗಬೇಕಾದ ದಾಂಪತ್ಯ ಆಕಾಂಕ್ಷಿಗಳಿಗೂ ಇದು
ಒಳ್ಳೆಯದು. ಹೀಗಿರುವ ಅಕ್ವೇರಿಯಂನಲ್ಲಿ ಕಡುಗಪ್ಪು ಪೂರ್ತಿಯಾಗಿ ಮೈಬಣ್ಣವಾಗಿರುವ ಮೀನುಗಳಿರದಂತೆ ನೋಡಿಕೊಳ್ಳಿ.

*ಬಂಗಾರದ ಬಣ್ಣ, ನಸು ನೀಲಿ, ನಸುಗೆಂಪು, ಬಿಳಿಕಪ್ಪುಗಳು ಪಟ್ಟೆಯಾದ ಮೀನುಗಳು ಆಲೆಯಾಕಾರದ ವಜ್ರದ ಸ್ವರೂಪದಲ್ಲಿರುವ ಮೀನುಗಳು ಅತ್ಯುತ್ಸಾಹದಿಂದ ಪುಟಿಯುವಂತೆ, ಕತ್ತು, ಮೂತಿ ಕೊಂಕಿಸುತ್ತಾ ಓಡಾಡುತ್ತಿರಲಿ. ಸೂರ್ಯ ಬರುವ ಮುನ್ನ ಆಹಾರವನ್ನು ಹಾಕುವ ಪದ್ಧತಿ ಮಾಡಬೇಡಿ. ಮುಂಜಾನ ಸೂರ್ಯಬಂದಾಗಲೇ ಆಹಾರದ ಗೋಲಿಗಳು ಅಕ್ವೇರಿಯಂ ಒಳಗೆ ಮೀನುಗಳಿಗೆ ನೀಡುವ ಅಭ್ಯಾಸ ನೆರವೇರಲಿ.

*ಒಳಗಿನ ನೀರುನಸು ನೀಲಿಯನ್ನು ಹಳದಿ ಛಾಯೆಯ ಬೆಳಕಲ್ಲಿ ಹೊಂದುವಂತೆ ಪ್ರತಿಫ‌ಲಿಸುವಂತಾಗಲಿ. ಹೊರಸೂಸುವಂಥ ರೀತಿಯಲ್ಲಿ ಇರಲಿ.ಇದರಿಂದ ಮನೆಯೊಳಗೆ ಪರಸ್ಪರರನ್ನು ಅರಿಯುವ ನಿಟ್ಟಿನ ವಿಚಾರದಲ್ಲಿ ಒಂದು ಆದ್ರಾತೆ ನಿರ್ಮಾಣಗೊಳ್ಳಲು ಸಹಾಯವಾಗುತ್ತದೆ.

*ಹಕ್ಕಿಗಳ ವಿಷಯಕ್ಕೆ ಬಂದಾಗ, ಬಂಧನಕ್ಕೆ ತಳ್ಳಿಕೊಂಡ ಹಕ್ಕಿಗಳು ಮನೆಯೊಳಗಡೆ ಇರಲೇ ಬಾರದು. ಗುಬ್ಬಿಗಳ ವಿಷಯದಲ್ಲಿ ಬಂಧನವೆಂಬುದು ನಿರ್ಮಾಣವಾಗದಿದ್ದರೂ ಹಾರಾಡಿಕೊಂಡಿರುವ ಗುಬ್ಬಿಗಳು ಕೂಡಾ ಮನೆಯಲ್ಲಿ ಗೂಡು ಕಟ್ಟದಿದ್ದರೆ ಒಳ್ಳೆಯದು.  ಯಾಕೆಂದರೆ ಗುಬ್ಬಿಗಳು ತಮ್ಮ ಆಹಾರವಾದ ಕೀಟಗಳನ್ನು ಮನೆಯೊಳಗೆ ತಂದುಕೊಂದು ತಿನ್ನುವ ಅದರ ಭೋಜನ ವಿಶೇಷ ಸಂಭವಿಸಕೂಡದು. ಗುಬ್ಬಿಗಳನ್ನು ಈ ವಿಷಯದಲ್ಲಿ ಮನುಷ್ಯ ಪ್ರಯತ್ನಗಳೊಡನೆ ಈ ನೆಲೆಯಲ್ಲಿ ನಿಯಂತ್ರಿಸಲಾಗದು. ಈ ಕಾರಣದಿಂದಾಗಿ ಗುಬ್ಬಿಗಳು ಮನೆಯೊಳಗಡೆ ನಿಷಿದ್ಧವೇ ಆಗಿವೆ.

*ಉಳಿದಂತೆ ಗಿಣಿ ಲವ್‌ ,ಬರ್ಡ್ಸ್‌ ಪಾರಿವಾಳಗಳು ಸಹಾ ಮನೆಯೊಳಗೆ ನಿಷಿದ್ಧವೇ ಆಗಿವೆ. ಇವು ಮನೆಯೊಳಗೆ ತನ್ನಿಂತಾನೆ ವಸತಿ ನಿರ್ಮಿಸಿಕೊಳ್ಳುವುದು ಬೇಡ. ಜೊತೆಗೆ ಪಂಜರವೊಂದನ್ನು ನಿರ್ಮಿಸಿ ರೆಕ್ಕೆಗಳನ್ನು ಸಂಯೋಜಿಸಿಕೊಂಡ ಇವುಗಳ ಅಸಹಾಯಕ ಸೆರೆವಾಸವೂ ಬೇಡ….