Breaking News

ಕೋಟೆಗಳು ಹಾಗೂ ಕಡಲ ತೀರಗಳ ನಾಡು ಅಗುವಾಡಾ..!

SHARE......LIKE......COMMENT......

ಟ್ರಾವೆಲ್:

ಭಾರತದಲ್ಲಿ ಸಮರ್ಪಕವಾಗಿ ನಿರ್ವಹಿಸಲ್ಪಡುತ್ತಿರುವ ಪಾರಂಪರಿಕ ಕಟ್ಟಡಗಳಲ್ಲಿ ಅಗುವಾಡಾ ಕೋಟೆಯು ಒಂದಾಗಿದೆ. 17 ನೇ ಶತಮಾನದಲ್ಲಿ ಪೋರ್ಚುಗೀಸರು ಡಚ್ ಹಾಗು ಮರಾಠರ ಆಕ್ರಮಣಗಳಿಂದ ರಕ್ಷಿಸಿಕೊಳ್ಳಲು ಇದರ ನಿರ್ಮಾಣವನ್ನು ಮಾಡಿದ್ದು, ಇಂದು ಇದು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.  ಈ ಕೋಟೆ ಹಾಗು ಅದರ ದೀಪಗೃಹದಲ್ಲಿ ನಿಂತು ನೋಡಿದಾಗ ಅರೇಬಿಯನ್ ಸಮುದ್ರ, ಅಗುವಾಡಾ ಬೀಚ್ ಮತ್ತು ತಾಜ್ ವಿವಾಂತಾ ಫೈವ್ ಸ್ಟಾರ ಹೋಟೆಲ್ ನ ಅದ್ಭುತ ದೃಶ್ಯವು ನೋಡುಗರನ್ನು ಮೂಕವಿಸ್ಮಿತರನ್ನಾಗಿರಾಗಿಸುತ್ತದೆ…

ಸ್ವಲ್ಪ ಅಧಿಕ ಕಾಸು ಕೊಟ್ಟರೂ ಪರ್ವಾಗಿಲ್ಲ ಒಂದು ಒಳ್ಳೆಯ ಅನುಭವವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಹಂಬಲ ಪಡುವವರು ಇಲ್ಲಿರುವ ತಾಜ್ ವಿವಾಂತಾ ಫೈವ್ ಸ್ಟಾರ ಹೊಟೆಲನಲ್ಲಿ ತಂಗಬಹುದಾಗಿದ್ದು ಉತ್ಕೃಷ್ಟ ಮಟ್ಟದ ಅನುಭವವನ್ನು ಪಡೆಯಬಹುದು. ಅಗುವಾಡಾ ಕೋಟೆ ಮತ್ತು ಬೀಚ್ ಕ್ಯಾಂಡೋಲಿಮ್  ಸನಿಹದಲ್ಲಿವೆ.

ಪ್ರತಿ ಸಾಯಂಕಾಲ ಇಲ್ಲಿ ಮಾರುಕಟ್ಟೆಯು ಜೋರಾಗಿದ್ದು ವಿವಿಧ ಬಗೆಯ ವಸ್ತುಗಳು, ಹಲವು ಮಾದರಿಯ ಸಾಂಪ್ರದಾಯಿಕ ಉಡುಪುಗಳನ್ನು ಅಗ್ಗ ಬೆಲೆಗಳಲ್ಲಿ ಖರಿದಿ ಮಾಡಬಹುದಾಗಿದೆ.ನೀವೆನಾದರು ಗೋವಾದ ಹಲವಾರು ಸ್ಥಳಗಳಿಗೆ ಭೇಟಿ ನೀಡಲು ಯೋಚಿಸಿದ್ದರೆ, ಅಗುವಾಡಾದಲ್ಲಿ ವಸತಿ ಮಾಡುವುದು ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ಏಕೆಂದರೆ ಈ ಸ್ಥಳವು ಕೇಂದ್ರ ಬಿಂದುವಿನಂತಿದ್ದು ಗೋವಾದ ಇತರ ಭಾಗಗಳಿಗೆ ಇಲ್ಲಿಂದ ಸರಳವಾಗಿ ತಲುಪಬಹುದಾಗಿದೆ.

ಇನ್ನು ಈ ಪ್ರದೇಶಕ್ಕೆ ತಲುಪಲು ನಿಮಗೆ ಏರ್ಪೊರ್ಟ್ ಅಥವಾ ರೈಲು ನಿಲ್ದಾಣದಿಂದ ಸಾಕಷ್ಟು ಟ್ಯಾಕ್ಸಿ ಇಲ್ಲವೆ ಕ್ಯಾಬ್ ಗಳು ದೊರೆಯುತ್ತವೆ. ಡ್ರೈವಿಂಗ್ ಮಾಡುವ ಹಾಗಿದ್ದರೆ ರಸ್ತೆಯಲ್ಲಿ ಕಾಣುಸಿಗುವ ಮಾರ್ಗಸೂಚಿಗಳು ನಿಮ್ಮನ್ನು ಇಲ್ಲಿ ತಲುಪಿಸಲು ಸಾಕಷ್ಟು ನೆರವಾಗುತ್ತವೆ……..