ಬೆಂಗಳೂರು:
ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಡಿರುವ ಆರೋಪಕ್ಕೆ ಹಿರಿಯ ನಟ ರಾಜೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರ್ಜುನ್ ಅವರನ್ನು ಸುಮಾರು ವರ್ಷಗಳಿಂದ ನೋಡುತ್ತಿದ್ದೇನೆ. ಹಿರಿಯ ಕಲಾವಿದೆಯರಪ ಜೊತೆ ಅಭಿನಯಿಸಿದ್ದಾರೆ. ಅವರ ವಿರುದ್ಧ ಒಂದೂ ದೂರು ಇಲ್ಲ. ಇದೊಂದು ರೋಗ ಶುರುವಾಗಿದೆ ಎಂದರು.
ಅರ್ಜುನ್ ಒಳ್ಳೆಯ ಹುಡುಗ. ಸಂಭಾವಿತ ವ್ಯಕ್ತಿ ನಮ್ಮ ಅರ್ಜುನ್. ಇನ್ನೊಬ್ಬರ ಬಗ್ಗೆ ಕೆಣಕೋದಾಗಲಿ, ಆಪಾದನೆ ಮಾಡೋದಾಗಲಿ ಅಥವಾ ಕಾಮುಕ ದೃಷ್ಟಿಯಿಂದ ನೋಡೋದಾಗಲಿ ಸರಿಯಲ್ಲ ಎಂದು ಶೃತಿ ವಿರುದ್ಧ ರಾಜೇಶ್ ಕೆಂಡಾಮಂಡಲರಾಗಿದ್ದಾರೆ.ಇವರೆಲ್ಲ ನಿನ್ನೆ-ಮೊನ್ನೆ ಬಂದ ನಟಿಯರು. ಇವರಿಗೆ ಸರಿಯಾಗಿ ಕನ್ನಡ ಮಾತಾಡೋಕೆ ಬರಲ್ಲ. ಇವರೆಲ್ಲ ಅರ್ಜುನ್ ಮೇಲೆ ಏನು ಆಪಾದನೆ ಮಾಡೋದು. ಇವಳ ಮೇಲೆ ಕೇಸ್ ಹಾಕಿ ಮಾನನಷ್ಟ ಮೊಕದ್ದಮೆ ಹೂಡಬೇಕು ಎಂದು ಕಿಡಿಕಾರಿದ್ದಾರೆ…..