ಹಾವೇರಿ:
ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿವಿ ಇದೇ ತಿಂಗಳ 31 ರಂದು ನಾಲ್ಕನೇ ಘಟಿಕೋತ್ಸವ ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ವಿವಿ ಕುಲಪತಿ ಪ್ರೊ. ಡಿ.ಬಿ.ನಾಯಕ್ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಘಟಿಕೋತ್ಸವದಲ್ಲಿ ಕಾರಣಾಂತರಗಳಿಂದ ರಾಜ್ಯಪಾಲ ವಜುಭಾಯ್ ವಾಲಾ ಪಾಲ್ಗೊಳ್ಳುತ್ತಿಲ್ಲ ಎಂದರು. ಇದೇ ವೇಳೆ ಜಾನಪದ ವಿವಿಯ ಪ್ರಸ್ತುತ ಘಟಿಕೋತ್ಸವದಲ್ಲಿ ಕಲಾವಿದ ಟಿ.ಬಿ.ಸೋಲಬಕನ್ನವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ತಿಳಿಸಿದರು.
ಅಲ್ಲದೆ ಹೆಚ್.ಎನ್. ಮೀರಾಗೆ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಹಾಗೂ ವಿವಿಯ ವಿವಿಧ ವಿಷಯಗಳಲ್ಲಿ ಪದವಿ ಪಡೆದ 1331 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಗುವುದು ಎಂದು ನಾಯಕ್ ತಿಳಿಸಿದರು.