Breaking News

ಇಂದಿರಾ ಕ್ಯಾಂಟೀನ್ ಊಟ ತಿನ್ನಲು ಆಗ್ತಿಲ್ವಂತೆ..?

ಜನರ ಆರೋಗ್ಯದ ಜೊತೆ ಆಟ....

SHARE......LIKE......COMMENT......

ಬೆಂಗಳೂರು:

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಡವರು, ಮಧ್ಯಮ ವರ್ಗದವರು ಯಾರು ಹಸಿದ ಹೊಟ್ಟೆಯಲ್ಲಿ ಮಲಗಬಾರದೆಂದು ಕಡಿಮೆ ದರದಲ್ಲಿ ಊಟ ಸಿಗಲೆಂದು ಇಂದಿರಾ ಕ್ಯಾಂಟೀನ್‌ನ್ನು ಸ್ಥಾಪಿಸಿದರು. ಆದರೆ ಇಲ್ಲೊಂದು ಇಂದಿರಾ ಕ್ಯಾಂಟೀನ್ ಪಕ್ಕದಲ್ಲೇ ಕಸ ವಿಂಗಡಣೆ ಮಾಡುವುದರಿಂದ ಇಂದಿರಾ ಕ್ಯಾಂಟಿನ್‌ಗೆ ಬರುವ ಜನರು ಮೂಗು ಮುಚ್ಚಿಕೊಂಡು ಊಟ ಮಾಡುವಂತಾಗಿದೆ.ಇಂದಿರಾ ಕ್ಯಾಂಟೀನ್‌ಗೆ ಊಟ ತಿನ್ನಲು ಬರುವಂಥ ಗ್ರಾಹಕರಿಗೆ ದುರ್ವಾಸನೆ ಬೀರುತ್ತಿದ್ದು ಕ್ಯಾಂಟೀನ್‌ಗೆ ಬರಲು ಸಾರ್ವಜನಿಕರು ಹಿಂದೇಟು ಹಾಕುವಂತಾಗಿದೆ.ಅಲ್ಲದೆ ಪ್ರತಿನಿತ್ಯ ಸಾವಿರಾರು ಜನ ಓಡಾಡುವಂತ ಸ್ಥಳವಾದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಬೇರೆಡೆಗೆ ಸ್ಥಳಾಂತರಿಸುವಂತೆ ಜಯ ಕರ್ನಾಟಕ ಸಂಘಟನೆಯ ಕ್ಷೇತ್ರಾಧ್ಯಕ್ಷ ಮನವಿ ಮಾಡಿದರು. ಸರಿಯಾಗಿ ಕಸ ವಿಲೇವಾರಿ ಮಾಡದೇ ಜನರ ಆರೋಗ್ಯದ ಜೊತೆ ಆಟ ವಾಡುತ್ತಿರುವ ಪಾಲಿಕೆ ಅಧಿಕಾರಿಗಳು ಈಗ ಹಸಿದವರು ಊಟ ಮಾಡಲು ಸಹ ಆಗದಂತೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ……