ಹಾವೇರಿ:
ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಗರದ ಅಕ್ಕಮಹಾದೇವಿ ಹೊಂಡದಲ್ಲಿ ನಡೆದಿದೆ.ವಿನಯ ಗೌಳಿ(12) ವರ್ಷ ಮೃತ ಬಾಲಕ. ನಿನ್ನೆ ಪಾರ್ಕ್ಗೆ ಹೋಗಿ ಬರೋದಾಗಿ ಹೇಳಿ ಮನೆಯಿಂದ ಹೋಗಿದ್ದ ಬಾಲಕ ,ಹೊಂಡದಲ್ಲಿ ಈಜಲು ಹೋಗಿ ದುರ್ಘಟನೆ ಸಂಭವಿಸಿದೆ
ಬಾಲಕನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ, ಸ್ಥಳಕ್ಕೆ ಹಾವೇರಿ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ……