Breaking News

ಉತ್ತರಾಖಂಡ ರಾಜ್ಯದ ಸತ್ತಾಲ್‌ಗೆ ದಚ್ಚು ಪ್ರಯಾಣ..!

ದರ್ಶನ್‌ ಕ್ಯಾಮೆರಾ ಕಣ್ಣಲ್ಲಿ ಬಗೆಬಗೆಯ ಪ್ರಾಣಿ ಪಕ್ಷಿಗಳು....

SHARE......LIKE......COMMENT......

ಬೆಂಗಳೂರು:

ನಟ ದರ್ಶನ್‌ ಪರಿಸರ, ಪ್ರಾಣಿ ಪ್ರೇಮಿ. ಬಿಡುವು ಸಿಕ್ಕಿದಾಗಲೆಲ್ಲಾ ಕಾಡು ಸುತ್ತುವುದು ಅವರ ಹಾಬಿ. ಕಾಡಿನ ಬಗ್ಗೆ ಅವರಿಗೆ ಅಪಾರ ಕಾಳಜಿ. ದಚ್ಚುಗೆ ವನ್ಯಜೀವಿ ಛಾಯಾಗ್ರಹಣವೆಂದರೆ ಅಚ್ಚುಮೆಚ್ಚು. ಸಿನಿಮಾಗಳ ಶೂಟಿಂಗ್‌ ಇಲ್ಲದಿದ್ದರೆ ಕ್ಯಾಮೆರಾ ಮತ್ತು ಲೆನ್ಸ್‌ಗಳನ್ನು ಹೆಗಲಿಗೇರಿಸಿಕೊಂಡು ಕಾಡಿನಲ್ಲಿ ಅಲೆಯುತ್ತಾರೆ. ಇದೀಗ ದರ್ಶನ್, ಕ್ಯಾಮೆರಾವನ್ನು ಹೆಗಲಿಗೇರಿಸಿಕೊಂಡು ಉತ್ತರಾಖಂಡ ರಾಜ್ಯದ ಸತ್ತಾಲ್‌ಗೆ ಪ್ರಯಾಣ ಬೆಳಸಿದ್ದಾರೆ. ಇಲ್ಲಿ ಬಗೆಬಗೆಯ ಪ್ರಾಣಿ ಪಕ್ಷಿಗಳು ವಾಸವಾಗಿದ್ದು, ದರ್ಶನ್ ಅವುಗಳನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಿದ್ದಾರೆ. ದರ್ಶನ್‌ ಕಾಡಿನಿಂದ ಬಂದ ತಕ್ಷಣ ಮೈಸೂರು ಅಥವಾ ಬೆಂಗಳೂರಿನಲ್ಲಿ ಫೋಟೋ ಪ್ರದರ್ಶನ ಮತ್ತು ಮಾರಾಟಕ್ಕೆ ಸಿದ್ಧತೆ ಮಾಡಲಾಗಿದೆ. ಈ ಸಲ ದರ್ಶನ್‌ ಕ್ಯಾಮೆರಾ ಕಣ್ಣಲ್ಲಿ ಯಾವೆಲ್ಲ ಪಕ್ಷಿಗಳು ಬಂಧಿ ಆಗಲಿವೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ…….