ಲೈಫ್ ಸ್ಟೈಲ್:
ಎಲ್‌ಇಡಿ ಐ ಲ್ಯಾಶಸ್ ಇದೀಗ ಕಲರ್‌ಫುಲ್ ಕೃತಕ ರೆಪ್ಪೆಗಳ ಜಾಗಕ್ಕೆ ಬಂದಿವೆ. ಅಲ್ಟ್ರಾ ಮಾಡರ್ನ್ ಹುಡುಗಿಯರ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಿವೆ.
ಕೃತಕ ಕಣ್ಣಿನ ರೆಪ್ಪೆಗಳ ಬದಲಿಗೆ ಟೈನಿ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗಿರುತ್ತದೆ. ನೋಡಲು ಇವು ಚಿಕ್ಕದಾಗಿದ್ದರೂ ಪುಟ್ಟ ಮೆಷಿನ್ ಹೊಂದಿರುತ್ತವೆ. ಹೆಚ್ಚೆಂದರೇ ಒಂದೂವರೆ ಇಲ್ಲವೇ ಎರಡು ಇಂಚು ಉದ್ದವಾಗಿರುತ್ತವೆ. ತೀರಾಸೂಕ್ಷ್ಮವಾಗಿರುತ್ತವೆ.
ಲ್ಯಾಶಸ್‌ನಂತೆ ಇರುವ ಕೊನೆಯ ಅಂಚಿನಲ್ಲಿ ಪುಟ್ಟ ಸ್ಕಿನ್ ವರ್ಣದ ಪುಟ್ಟದಾದ ವೈರ್ ಕತ್ತಿನ ಹಿಂಭಾಗದಲ್ಲಿ ಅಥವಾ ಕೂದಲಿನ ಜುಟ್ಟಿನ ಕೆಳಗೆ ಅಡಗಿಸಬಹುದಾದ ಬ್ಯಾಟರಿ ಮೆಷಿನ್ ಹೊಂದಿರುತ್ತವೆ. ಇದನ್ನು ಕೂದಲ ಕೆಳಗೆ ಸಿಕ್ಕಿಸಬಹುದಾಗಿದೆ. ಆನ್ ಮಾಡಿದಾಕ್ಷಣ ಇವು ಪಳಪಳ ಎಂದು ಹೊಳೆಯಲು ಆರಂಭಿಸುತ್ತವೆ. ನೋಡಲು ವೈಬ್ರೆಂಟ್ ಲುಕ್ ನೀಡುತ್ತವೆ.
ವಿದೇಶದಲ್ಲಿ ಈ ಫ್ಯಾಷನ್ ಅತಿ ಹೆಚ್ಚಾಗಿ ಟ್ರೆಂಡ್‌ನಲ್ಲಿವೆ. ರ್ಯಾಂಪ್ ಶೋನಲ್ಲಿ ಬ್ರೈಟಾಗಿ ಕಾಣಲು ಈ ಕೃತಕ ಎಲ್‌ಇಡಿ ಐ ಲ್ಯಾಶ್ ಬಳಸಲಾಗುತ್ತದೆ. ಮೊದಮೊದಲು ಕೇವಲ ಶೋಗಳಲ್ಲಿ ಕಂಡು ಬರುತ್ತಿದ್ದ ಇವು ಇದೀಗ ಕಾಮನ್ ನೈಟ್ ಪಾರ್ಟಿಗಳಲ್ಲಿ ಕಾಣಿಸಲಾರಂಭಿಸಿವೆ.
ಚಿಕ್ಕ ಟೈನಿ ಮೆಷಿನ್ ಹಾಗೂ ಲೈಟ್‌ಗಳಿರುವುದರಿಂದ ಇವು ದುಬಾರಿ. ಆನ್‌ಲೈನ್‌ನಲ್ಲಿ ಇವು ದೊರಕುತ್ತವೆ. ನೈಟ್ ಪಾರ್ಟಿ ಹಾಗೂ ಡಾನ್ಸ್ ಪಾರ್ಟಿಗಳಲ್ಲಿ ಹುಡುಗಿಯರು ಅತಿ ಹೆಚ್ಚಾಗಿ ಬಳಸುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್ಸ್. ಆದರೆ, ಧರಿಸುವಾಗ ಎಚ್ಚರದಿಂದ ಇರಬೇಕು ಎನ್ನುತ್ತಾರೆ…….