Breaking News

ಕಾಶ್ಮೀರದಲ್ಲಿ ಬಿಜೆಪಿಗೆ ಭಾರೀ ಜಯ..!

ಜಮ್ಮು ಮತ್ತು ಕಾಶ್ಮೀರ, ಸ್ಥಳೀಯ ಸಂಸ್ಥೆಗಳ ಚುನಾವಣೆ....

SHARE......LIKE......COMMENT......

ಶ್ರೀನಗರ:

ಜಮ್ಮು ಮತ್ತು ಕಾಶ್ಮೀರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಮ್ಮುವಿನಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಕಾಶ್ಮೀರದಲ್ಲಿ ಕಾಂಗ್ರೆಸ್‌ ಸ್ವಲ್ಪ ಚೇತರಿಸಿ ಕೊಂಡಿದೆ. ಜಮ್ಮುವಿನಲ್ಲಿ 212 ವಾರ್ಡ್‌ಗಳಲ್ಲಿ ಬಿಜೆಪಿ, 110 ರಲ್ಲಿ ಕಾಂಗ್ರೆಸ್‌, 13ರಲ್ಲಿ ನ್ಯಾಶನಲ್‌ ಪ್ಯಾಂಥರ್ಸ್‌ ಪಾರ್ಟಿ ಹಾಗೂ 185 ಸ್ವತಂತ್ರರು ಆಯ್ಕೆಯಾಗಿದ್ದಾರೆ.

ಇನ್ನು ಕಾಶ್ಮೀರದಲ್ಲಿ 79ರಲ್ಲಿ ಕಾಂಗ್ರೆಸ್‌, 75ರಲ್ಲಿ ಬಿಜೆಪಿ, 71ರಲ್ಲಿ ಸ್ವತಂತ್ರರು ಮತ್ತು 2ರಲ್ಲಿ ಪೀಪಲ್ಸ್‌ ಕಾಂಗ್ರೆಸ್‌ ಹಾಗೂ 2 ಇತರರು ಗೆಲುವು ಸಾಧಿಸಿದ್ದಾರೆ.

ಕುಪ್ವಾರಾದಲ್ಲಿನ ಎಲ್ಲ 13 ಕ್ಷೇತ್ರ ಗಳಲ್ಲೂ ಪೀಪಲ್‌ ಕಾನ್ಫರೆನ್ಸ್‌ ಮುಖಂಡ ಸಜ್ಜದ್‌ ಗನಿ ಲೋನ್‌ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ. ಜಮ್ಮುವಿನ ಒಟ್ಟು 10 ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಆಡಳಿತ ನಡೆಸಲಿದೆ. ಉಗ್ರರ ಉಪಟಳ ಹೆಚ್ಚಿರುವ ಕಾಶ್ಮೀರದ ಬಾರಾಮುಲ್ಲಾ, ಅನಂತ್‌ನಾಗ್‌ ಹಾಗೂ ಶೋಪಿ ಯಾನ್‌ನಲ್ಲಿ ಬಿಜೆಪಿ ಹಿಂದೆಂದಿಗಿಂತಲೂ ಹೆಚ್ಚಿನ ಸ್ಥಾನ ಪಡೆದಿರುವುದು ಗಮನ ಸೆಳೆದಿದೆ.

ಇದೇ ವೇಳೆ ಶ್ರೀನಗರ ಮುನಿಸಿಪಲ್‌ ಕಾರ್ಪೊರೇಷನ್‌ನಲ್ಲಿ  ಜಾತ್ಯತೀತ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳಲು ಉತ್ಸಾಹ ಹೊಂದಿರುವುದಾಗಿ ಪ್ರದೇಶ ಕಾಂಗ್ರೆಸ್‌ ಸಮಿತಿ ಶನಿವಾರ ಹೇಳಿದೆ……