ರೋಣ:
ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಎಲ್ಲ ಬಡ, ಹರಿಜನ, ಗಿರಿಜನ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ನೀಡುವ ಮುಖಾಂತರ ಬುಡಕಟ್ಟು ಜನಾಂಗಗಳ ಅಭಿವೃದ್ಧಿಗೆ ಪಕ್ಷ ಬದ್ಧವಾಗಿದೆ ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ಗಾಡಗೋಳಿ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಬಡವರಿಗೆ ಕೇಂದ್ರ ಸರ್ಕಾರದ ಉಜ್ವಲ್ ಪ್ಲಸ್ ಯೋಜನೆ ಅಡಿಯಲ್ಲಿ ಗ್ಯಾಸ್ ವಿತರಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರು, ಇಲ್ಲಿ ವಾಸಿಸುವ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಬಡ ಕುಟುಂಬಗಳ ಮಹಿಳೆಯರಿಗೆ ಸಹಾಯ ಮಾಡುವ ಯೋಜನೆ ಜಾರಿಗೆ ತಂದಿದ್ದಿಲ್ಲ. ದೇಶ ಜನರ ಪ್ರೀತಿಗೆ ಪಾತ್ರರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿವರು ಜನಾಭಿಪ್ರಾಯದಂತೆ ಯಾವುದೇ ಗ್ರಾಪಂ ಸದಸ್ಯರಾಗದ ಒಬ್ಬ ಸಂತ, ಪ್ರಾಮಾಣಿಕ ವ್ಯಕ್ತಿಯಾದ ನರೇಂದ್ರ ಮೋದಿಯವರನ್ನು ರಾಜಕೀಯಕ್ಕೆ ತರುವ ಮುಖಾಂತರ ಗುಜರಾತ್ ಮುಖ್ಯಮಂತ್ರಿ ಮಾಡಿದರು.
ಅವರ ದೂರದೃಷ್ಟಿ, ಆಡಳಿತದ ಪಾರದರ್ಶಕತೆ ಸೇರಿದಂತೆ ಅನೇಕ ಜನಪರ ಯೋಜನೆಗಳ ಮುಖಾಂತರ ದೇಶದಲ್ಲಿಯೇ ಮಾದರಿ ರಾಜ್ಯವೆಂಬ ಬಿರುದನ್ನು ಪಡೆಯುವ ಮುಖಾಂತರ 2014ರಲ್ಲಿ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಮೋದಿಯವರನ್ನು ದೇಶದ ಜನತೆ ಎತ್ತಿ ಹಿಡಿದರು. ಅಧಿಕಾರಕ್ಕೆ ಬಂದ ನಂತರ ದೇಶದ ಶ್ರೀಮಂತರ ಬಳಿ ಮನವಿ ಮಾಡಿಕೊಂಡ ಗ್ಯಾಸ್ ಸಬ್ಸಿಡಿಯನ್ನು ಬಿಟ್ಟುಕೊಡುವಂತೆ ಬೇಡಿಕೊಂಡರು. ಅವರ ಮಾತಿಗೆ ಒಪ್ಪಿಕೊಂಡ ದೇಶದ ಜನರು ಬಡವರಿಗಾಗಿ ಬಿಟ್ಟುಕೊಟ್ಟರು. ಅದರಲ್ಲಿ ನಾನು ಒಬ್ಬನು ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ.
ಬಡತನ ಕುಟುಂಬ ಮಹಿಳೆಯರು ಹಳ್ಳ ಕೊಳ್ಳದ ಬದಿಯಲ್ಲಿ ಬಿದ್ದಿರುವ ಕಟ್ಟಿಗೆಯನ್ನು ತಂದು ಆಹಾರ ತಯಾರಿಸುವಾಗ ಹೊಗೆಯಿಂದ ಅವರಿಗಾಗುವ ಆರೋಗ್ಯದ ಹಾನಿಯನ್ನು ಅರಿತ ಪ್ರಧಾನಿ ಇಂದು ಎಲ್ಲ ಕುಟುಂಬಗಳಿಗೆ ಗ್ಯಾಸ್ ನೀಡಲು ಮುಂದಾಗಿದ್ದಾರೆ. ಮೊದಲ ಬಾರಿ ಗ್ಯಾಸ್ ಬಳಕೆ ಮಾಡುವ ತಾಯಂದಿರು ಹಾಲನ್ನು ಉಕ್ಕಿಸುವಾಗ ದೇಶದ ಹೆಮ್ಮೆಯ ಮಗನಾದ ನರೇಂದ್ರ ಮೋದಿಯವರಿಗೆ ಆರೋಗ್ಯ ಹಾಗೂ ಕಳ್ಳಕಾಕರಿಂದ ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸುವಂತೆ ಮನವಿ ಮಾಡಿದರು……