ರಾಯಚೂರು:
ರಾಜ್ಯದ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ನಿಗದಿತ ಸಮಯದಲ್ಲಿ ಕಲ್ಲಿದ್ದಲು ರವಾನೆಯಾಗದ ಕಾರಣ ಕ್ಷಾಮ ಉಂಟಾಗಿದೆ. ತಿತ್ಲಿ ಚಂಡಮಾರುತ ಪರಿಣಾಮ ಮಹಾನದಿ ಕೋಲ್ ಫೀಲ್ಡ್ ಹಾಗೂ ವೆಸ್ಟರ್ನ್ ಕೋಲ್ ಮೈನ್ಸ್ನಿಂದ ಕಲ್ಲಿದ್ದಲು ಸರಬರಾಜು ಮಾಡುವುದಕ್ಕೆ ತೊಂದರೆ ಉಂಟಾಗಿದೆ.
ರಾಯಚೂರಿನ ಶಕ್ತಿನಗರದ ಆರ್ಟಿಪಿಎಸ್ ಕೇಂದ್ರದಿಂದ ಶೇ. 40 ರಷ್ಟು ವಿದ್ಯುತ್ ಉತ್ಪಾದಿಸಿ ರಾಜ್ಯ ವಿದ್ಯುತ್ ಜಾಲಕ್ಕೆ ನಿತ್ಯ ರವಾನಿಸಲಾಗುತ್ತದೆ. ಆದರೆ ಕಳೆದ ಮೂರು ತಿಂಗಳಿನಿಂದ ಈ ಕೇಂದ್ರಕ್ಕೆ ಕಲ್ಲಿದ್ದಲಿನ ಕೊರತೆಯಾಗಿರೋ ಪರಿಣಾಮ ವಿದ್ಯುತ್ ಉತ್ಪಾದನೆಯಲ್ಲಿ ಇಳಿಮುಖವಾಗಿದೆ. ಅಲ್ಲದೇ ಕಲ್ಲಿದ್ದಲು ದಾಸ್ತನು ಸಹ ಖಾಲಿಯಾಗಿದೆ.ಇದ್ರಿಂದಾಗಿ ವಿದ್ಯುತ್ ಉತ್ಪಾದನೆ ಕುಠಿತವಾಗಿದ್ದು, ರಾಜ್ಯದ ಜನ ಕತ್ತಲಲ್ಲಿ ಸಮಯ ಕಳೆಯಬೇಕಾದ ಪರಿಸ್ಥಿತಿ ಎದುರಾಗಲಿದೆ…..