ಬೆಂಗಳೂರು:
ಚುನಾವಣಾ ಆಯೋಗದ ನೋಟಿಸ್ ನಡುವೆಯೂ ಕೋಡಿಮಠದ ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿಗಳು ಮತ್ತೆ ರಾಜಕೀಯ ಕುರಿತು ಹೇಳಿಕೆ ಕೊಟ್ಟಿದ್ದಾರೆ. ಮೇ 23ರವರೆಗೆ ನಾನೇನೂ ಮಾತನಾಡಲ್ಲ ಅಂತಾ ಹೇಳಿದ್ದ ಸ್ವಾಮೀಜಿಗಳು ಮತ್ತೊಮ್ಮೆ ನೀವೆಲ್ಲಾ ಅಂದುಕೊಂಡಂತೆ ಬದಲಾವಣೆ ಆಗುತ್ತದೆ ಎಂದು ಹೇಳಿರುವ ಮೂಲಕ ಮತ್ತೊಮ್ಮೆ ಆಯೋಗದ ಮಾತನ್ನ ದಿಕ್ಕರಿಸಿದ್ದಾರೆ….
ಕೋಡಿಮಠದ ಶ್ರೀಗಳು ನುಡಿಯುವ ಭವಿಷ್ಯ ಪದೇ ಪದೇ ಸುಳ್ಳಾಗುತ್ತಲೇ ಇದೆ. ಮಳೆ ಬರುತ್ತೆ ಅಂತಾರೆ ಆದ್ರೆ ಬರಗಾಲ ಬರುತ್ತೆ. ಯಾರು ಸಿಎಂ ಆಗ್ತಾರೆ ಅಂತಾ ಹೇಳ್ತಾರೋ ಅವ್ರು ಸಿಎಂ ಆಗಿಲ್ಲ. ದೋಸ್ತಿ ಸರ್ಕಾರ ಬೀಳುತ್ತೆ ಅಂತಾ ನಾಲ್ಕೈದು ಬಾರಿ ಹೇಳಿದ್ದ ಭವಿಷ್ಯ ಸುಳ್ಳಾಗಿದೆ. ರಾಜಕೀಯದ ಬಗ್ಗೆ ಹೇಳೋ ಭವಿಷ್ಯವೆಲ್ಲಾ ಸುಳ್ಳಾಗ್ತಿದೆ….