ತಮಿಳುನಾಡು:
ತಮಿಳುನಾಡಿನ ತೂತುಕುಡಿಯ ಡಿಎಂಕೆ ನಾಯಕಿ ಕನಿಮೊಳಿ ಮನೆ ಮೇಲೆ ತಡರಾತ್ರಿ ಐಟಿ ದಾಳಿ ನಡೆದಿದೆ. ತೂತುಕುಡಿ ಲೋಕಸಭಾ ಕ್ಷೇತ್ರದಲ್ಲಿ ಕನಿಮೋಳಿ ವಿರುದ್ಧ ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರ್ ರಾಜನ್ ಸ್ಪರ್ಧಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ವೆಲ್ಲೂರು ಹೊರತುಪಡಿಸಿ ಉಳಿದ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 18ರಂದೇ ಮತದಾನ ನಡೆಯಲಿದೆ. ಐಟಿ ಅಧಿಕಾರಿಗಳ ಕ್ರಮವನ್ನು ಡಿಎಂಕೆ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ, ಎಐಎಡಿಎಂಕೆ ಪಕ್ಷಗಳು ಡಿಎಂಕೆ ಅಭ್ಯರ್ಥಿಗಳನ್ನು ಬೆದರಿಸ್ತಿವೆ ಎಂದು ಆರೋಪಿಸಿದ್ದಾರೆ……