ಹೆಲ್ತ್ ಕೇರ್:
ಥೈರಾಯ್ಡ್ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಮಹಿಳೆಯರಲ್ಲಿ ಈ ರೀತಿಯ ತೊಂದರೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಥೈರಾಯ್ಡ್ ಅನ್ನು ಹೈಪರ್ ಥೈರಾಯ್ಡ್ ಮತ್ತು ಹೈಪೋ ಥೈರಾಯ್ಡ್ ಎಂದು ಎರಡು ರೀತಿಯಲ್ಲಿ ವಿಂಗಡಿಸಬಹುದು. ಹೈಪರ್ ಥೈರಾಯ್ಡ್ ಬಂದರೆ ತೆಳ್ಳಗಾದರೆ ಹೈಪೋ ಥೈರಾಯ್ಡ್ ನಲ್ಲಿ ವಿಪರೀತ ದಪ್ಪಗಾಗುತ್ತಾರೆ.
ಥೈರಾಯ್ಡ್ ಸಮಸ್ಯೆಗೆ ಪ್ರತಿದಿನ ಮಾತ್ರೆ ತೆಗೆದುಕೊಂಡರೆ ಕಡಿಮೆಯಾಗುವುದು. ಅದರ ಜೊತೆಗೆ ಈ ಕೆಳಗಿನ ಆಹಾರಸಾಮಾಗ್ರಿಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ದೇಹ ತೂಕದಲ್ಲಿ ವ್ಯತ್ಯಾಸವಾಗುವುದನ್ನು ತಡೆಯಬಹುದು.
ಸೋಯಾ ಪದಾರ್ಥಗಳನ್ನು ತಿನ್ನಬಾರದು:ಹೈಪೋ ಅಥವ ಹೈಪರ್ ಥೈರಾಯ್ಡ್ ಕಾಯಿಲೆ ಇರುವವರು ಸೋಯಾ ಪದಾರ್ಥಗಳನ್ನು ತಿನ್ನಬಾರದು. ಸೋಯಾ ಸಾಸ್ ಮತ್ತಿತರ ಸೋಯಾ ಪದಾರ್ಥಗಳ್ನು ಸೇವಿಸಿದರೆ ಹಾರ್ಮೋನ್ ನಲ್ಲಿ ವ್ಯತ್ಯಾಸ ಉಂಟಾಗುತ್ತದೆ.
ಐಯೋಡಿನ್ ಅಧಿಕವಿರುವ ಆಹಾರಗಳನ್ನು ಸೇವಿಸಬೇಕು: ಸಮುದ್ರ ಆಹಾರಗಳು, ಮೊಸರು, ಆಲೂಗೆಡ್ಡೆ, ಸ್ಟ್ರಾಬರಿ ಹಾಗೂ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಬೇಕು.
ಆರೋಗ್ಯಕರ ಕೊಬ್ಬಿನ ಆಹಾರ: ಒಮೆಗಾ 3 ಕೊಬ್ಬಿನಂಶವಿರುವ ಆಹಾರಗಳನ್ನು ತಿನ್ನಬೇಕು.
ಎಣ್ಣೆಯಂಶ: ಒಳ್ಳೆಯ ಕೊಬ್ಬಿನಂಶ ಇರುವ ಎಣ್ಣೆ ಬಳಸುವುದು ಒಳ್ಳೆಯದು. ಅಧಿಕ ಕ್ಯಾಲೋರಿ ಇರುವ ಎಣ್ಣೆ ಬಳಸಿ ತಯಾರಿಸಿದ ಅಡುಗೆಯನ್ನು ತಿನ್ನಬಾರದು.
ಕ್ಯಾಲ್ಸಿಯಂ ಇರುವ ಆಹಾರಗಳು: ಕ್ಯಾಲ್ಸಿಯಂ ಅಧಿಕ ಇರುವ ಆಹಾರಗಳನ್ನು ಸೇವಿಸಬೇಕು. ಬಾದಾಮಿ, ಮೊಸರು, ಹಾಲು ಇವುಗಳಲ್ಲಿ ಕ್ಯಾಲ್ಸಿಯಂ ಅಂಶವಿರುತ್ತದೆ.
ಕೆಫೀನ್ ಇರುವ ಅಂಶ ಸೇವಿಸಬಾರದು: ಡಾರ್ಕ್ ಚಾಕಲೇಟ್, ಕಾಫಿ ಇವುಗಳನ್ನುಲ್ಲಿ ಕೆಫೀನ್ ಇರುತ್ತದೆ. ಆದ್ದರಿದ ಇಂತಹ ವಸ್ತುಗಳನ್ನು ಮುಟ್ಟಬಾರದು.
ನಿಂಬೆಹಣ್ಣು: ಥೈರಾಯ್ಡ್ ಕಾಯಿಲೆ ಇದ್ದರೆ ತಲೆಸುತ್ತು, ಒತ್ತಡ ಮುಂತಾದ ತೊಂದರೆಗಳು ಕಾಣಸಿಗುತ್ತದೆ. ನಿಂಬೆ ಹಣ್ಣಿನ ರಸ ದೇಹಕ್ಕೆ ಸೇರಿದರೆ ಈ ರೀತಿಯ ಸಮಸ್ಯೆಗಳು ಕಡಿಮೆಯಾಗುವುದು……