Breaking News

ದೇವರ ಪೂಜೆಯಲ್ಲಿ ಬಿಲ್ವಪತ್ರೆಯ ಪ್ರಾಮುಖ್ಯತೇನು…?

ಯಾವ ಬಗೆಯ ಪತ್ರೆ ಯಾವ ದೇವರಿಗೆ ಶ್ರೇಷ್ಠ....

SHARE......LIKE......COMMENT......

ಧಾರ್ಮಿಕ ಪರಂಪರೆ:

ದೇವರ ಕಾರ್ಯಗಳಿಗೆಲ್ಲ ವಿವಿಧ ಬಗೆಯ ಪತ್ರೆಗಳು ಬೇಕೇಬೇಕು. ಅದರಲ್ಲೂ ಒಬ್ಬೊಬ್ಬ ದೇವರಿಗೂ ಒಂದೊಂದು ಪತ್ರೆಯ ವಿಶೇಷ. ಈ ಪತ್ರೆಗಳು ಮತ್ತು ಅವುಗಳನ್ನರ್ಪಿಸಿ ಪೂಜಿಸಿದರೆ ಸಿಗುವ ವಿಶೇಷ ಫಲಾಫಲಗಳ ಬಗ್ಗೆ ಇಲ್ಲಿದೆ ಮಾಹಿತಿ…

ಗರಿಕೆ ಪತ್ರೆ:ಗರಿಕೆ ಪತ್ರೆಯನ್ನು ಮೊದಲು ಪೂಜಿತನಾದ ಮಹಾಗಣಪತಿಗೆ ಸಲ್ಲಿಸುತ್ತಾರೆ. ಪ್ರತಿದಿನವೂ ಗರಿಕೆಯನ್ನು ಗಂಧದಲ್ಲಿ ಅದ್ದಿ ಪೂಜೆ ಮಾಡಿದರೆ ಸಕಲ ಇಷ್ಟ ಕಾರ್ಯಗಳು ನೆರವೇರುತ್ತವೆ. ಶನಿದೇವರಿಗೆ ಪಂಚಮಶನಿಕಾಟ, ಅಷ್ಟಮಶನಿಕಾಟ, ಏಳೂವರೆ ವರ್ಷದ ಶನಿಕಾಟವಿದ್ದವರು ಗರಿಕೆಯನ್ನು ಶನೇಶ್ವರನಿಗೆ ಅರ್ಪಿಸಿದರೆ ಆತನಿಂದ ಆಗುವ ಕಷ್ಟಗಳ ಬಲ ಕಡಿಮೆಯಾಗುತ್ತದೆ.

ಆಂಜನೇಯ ಸ್ವಾಮಿಗೆ ಪ್ರತಿದಿನವೂ ಗರಿಕೆಯಿಂದ ಪೂಜೆ ಮಾಡಿದರೆ ಸಂಕಲ್ಪ ಮಾಡಿಕೊಂಡ ಕೆಲಸಗಳು ನೆರವೇರುತ್ತವೆ. ಮಹಾಗಣಪತಿಗೆ ಗರಿಕೆಯ ಹಾರವನ್ನು ಸಮರ್ಪಿಸಿದರೆ ಸಕಲ ಕಾರ್ಯದಲ್ಲಿ ಜಯ ಲಭಿಸಿ ಇಷ್ಟಾರ್ಥಸಿದ್ಧಿ ದೊರಕುತ್ತದೆ. ಪ್ರಾಣಿಗಳಿಗೆ ಸರಿಯಾಗಿ ಜೀರ್ಣವಾಗದೆ ಇದ್ದಾಗ ಗರಿಕೆಯನ್ನು ತಿಂದು ಆರೋಗ್ಯ ಸರಿಪಡಿಸಿಕೊಳ್ಳುತ್ತವೆ. ಹಾಗೆಯೇ ಮನುಷ್ಯನೂ ಗರಿಕೆಯ ರಸವನ್ನು ಕುಡಿದರೆ ಆರೋಗ್ಯ ಭಾಗ್ಯ ಲಭಿಸುತ್ತದೆ…

ಮರಗ ಪತ್ರೆ:ಯಾರಿಗೆ ಬಹಳ ವರ್ಷಗಳಾದರೂ ಅವರ ಕೋರಿಕೆ ನೆರವೇರುವುದಿಲ್ಲ, ಯಾರು ಮಾಡತಕ್ಕ ಉದ್ಯೋಗದಲ್ಲಿ ಬಹು ಸಮಯದಿಂದ ತೊಂದರೆ ತಾಪತ್ರಯಗಳನ್ನು ಅನುಭವಿಸುತ್ತಿದ್ದಾರೋ ಅಂಥವರು ಮಹಾಗಣಪತಿಗೆ ಪತ್ರೆಯನ್ನು ಸಮರ್ಪಿಸಿದರೆ ಅನುಕೂಲವಾಗುತ್ತದೆ. ಭಗವಂತನಿಗೆ ದಿನವೂ ಮರಗ ಪತ್ರೆಯಿಂದ ಪೂಜೆ ಮಾಡುತ್ತಿದ್ದರೆ ಶಾಶ್ವತ ಪದವಿ ಹಾಗೂ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುತ್ತಾರೆ.

ಹುಟ್ಟಿದಾಗಿನಿಂದಲೂ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಸಾಧನೆ ಮಾಡಲು ಹೋದರೂ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎಂಬಂತಾಗಿರುವಾಗ, ಸಾಧನೆ ಶೂನ್ಯವಾಗಿರುವ ಸಮಯದಲ್ಲಿ ಮರಗ ಪತ್ರೆಯಿಂದ ಮನೆದೇವರಿಗೆ ಪೂಜೆ ಮಾಡಿದರೆ ಶುಭಲಾಭ. ಹಲವು ವರ್ಷಗಳಾದರೂ ಮದುವೆಯಾಗಿಲ್ಲ ಎಂಬಂತಹ ಸಂದರ್ಭದಲ್ಲಿ ಶ್ರೀ ವಿಘ್ನೇಶ್ವರನಿಗೆ ಬೆಲ್ಲವನ್ನು ನೈವೇದ್ಯಕ್ಕೆ ಇಟ್ಟು ಮರಗ ಪತ್ರೆಯಿಂದ ಅಷ್ಟೋತ್ತರ ಮಾಡುತ್ತಿದ್ದರೆ ಶೀಘ್ರವಾಗಿ ಕಂಕಣ ಭಾಗ್ಯ ಒದಗಿ ಬರುತ್ತದೆ.

ಶಿವನಿಗೆ ಪ್ರತಿದಿನ ಪತ್ರೆಯಿಂದ ಪೂಜೆ ಏಕೆ ಮಾಡುತ್ತಾರೆ?

ಬಿಲ್ವಪತ್ರೆಗೆ ಬಹಳ ಮಹತ್ವವಿದೆ. ಸಾಮಾನ್ಯವಾಗಿ ಶಿವರಾತ್ರಿ ಹಬ್ಬ ಬಂದರಂತೂ ಇದರ ಮಹತ್ವ ಇನ್ನೂ ಹೆಚ್ಚುತ್ತದೆ. ಅಂದು ಈಶ್ವರನ ದೇವಸ್ಥಾನಗಳಲ್ಲಿ ಬಿಲ್ವಪತ್ರೆಯಿಂದ ಪೂಜಾರಾಧನೆ ಮಾಡುವುದು ವಾಡಿಕೆ. ಈಶ್ವರನಿಗೆ ಪ್ರತಿ ದಿನವೂ ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ತುಂಬಾ ಶ್ರೇಷ್ಠ. ಈಶ್ವರನು ಜಲಪ್ರಿಯ ಹಾಗೂ ಬಿಲ್ವಪ್ರಿಯ.

ಸಾಮಾನ್ಯವಾಗಿ ಈಶ್ವರನ ಇರುವ ಕಡೆ ಬಿಲ್ವಪತ್ರೆ ಮರವು ಇದ್ದೇ ಇರುತ್ತದೆ. ಈ ಬಿಲ್ವ ಪತ್ರೆ ಮರದಲ್ಲಿ ಮುಳ್ಳು ಏನಿದೆ ಅದು ಶಕ್ತಿ ಮಾತೆಯನ್ನು ಗಿಡದ ಕೊಂಬೆಗಳು. ವೇದಗಳನ್ನು ಮರದ ಬೇರುಗಳು ಈಶ್ವರನನ್ನು ಸೂಚಿಸುತ್ತದೆ. ಬಿಲ್ವಪತ್ರೆಯ ಮೂರು ದಳಗಳಿಂದ ಕೂಡಿ ಒಂದೊಂದು ದಳವು ಕೂಡಾ ಒಂದೊಂದು ಗುಣಗಳನ್ನು ಹೊಂದಿದೆ. ಅವು ಸತ್ವ, ರಜೋ, ತಮಾ ಗುಣಗಳನ್ನು ಸೂಚಿಸುತ್ತದೆ. ಈ ಮೂರು ದಳಗಳನ್ನು ಈಶ್ವರನ ಮೂರು ಕಣ್ಣುಗಳು ಎಂಬ ನಂಬಿಕೆ..

ಬಿಲ್ವ ಪತ್ರೆ ಮರದ ಪೌರಣಿಕ ಹಿನ್ನಲೆ ಏನು?

ಬಿಲ್ವಪತ್ರೆಯನ್ನು ಹಿಂದೂ ಸಂಸ್ಕೃತಿಯಲ್ಲಿ ಬಹಳ ಶ್ರೇಷ್ಠ ಹಾಗೂ ಪರಮ ಪವಿತ್ರ ಎನ್ನಲಾಗುತ್ತದೆ. ಧರ್ಮಗ್ರಂಥಗಳಲ್ಲಿಯೂ ಬಿಲ್ವಪತ್ರೆಯ ಬಗ್ಗೆ ತಿಳಿಸಲಾಗಿದೆ. ಬಹುಕಾಲದವರೆಗೂ ಗಂಡ ಹೆಂಡತಿಗೆ ಸಂತಾನ ಪ್ರಾಪ್ತಿಯಾಗದೆ ಇದ್ದಾಗ ಒಂದು ಮಂಡಲ ಅಂದರೆ 48 ದಿನ ಬಿಲ್ವಪತ್ರೆಯ ಮರಕ್ಕೆ ಪೂಜೆ ಮಾಡಿದರೆ ಮಕ್ಕಳ ಫಲ ದೊರಕುವುದೆಂದು ಕೆಲವು ಗ್ರಂಥಗಳಲ್ಲಿ ತಿಳಿಸಲಾಗಿದೆ. ಮರಕ್ಕೆ ಪೂಜೆ ಸಲ್ಲಿಸಿ ಪತ್ರೆಯನ್ನು ಸೇವಿಸಿದರೆ ಶುಭವಾಗುತ್ತದೆ ಎನ್ನುವುದೂ ಸಹಾ ಒಂದು ನಂಬಿಕೆ.

ಈ ಬಿಲ್ವಪತ್ರೆಯ ಮರಕ್ಕೆ ಶಿವದ್ರುಮ ಎಂಬ ಮತ್ತೊಂದು ಹೆಸರಿದೆ. ಶ್ರೀ ಮಹಾವಿಷ್ಣು ಅಲಂಕಾರ ಹಾಗೂ ತುಳಸಿ ಪ್ರಿಯನಾದರೆ ಈಶ್ವರನು ಜಲಪ್ರಿಯ ಹಾಗೂ ಬಿಲ್ವಪ್ರಿಯ. ಮಾನವನು ಮಾಡಿದ ಪಾಪ ಕರ್ಮಗಳು ಈ ಬಿಲ್ವಪತ್ರೆಯನ್ನು ಈಶ್ವರನಿಗೆ ಅರ್ಪಿಸುವುದರಿಂದ ನಾಶವಾಗುತ್ತದೆ ಎಂಬುದು ನಂಬಿಕೆ.ಬಿಲ್ವಪತ್ರೆಯ ಮರವು ಶ್ರೀ ಮಹಾಲಕ್ಷ್ಮಿಯ ಬಲದ ಕೈಕಮಲದಿಂದ ಹುಟ್ಟಿದೆ ಎಂದು ಪುರಾಣಗಳು ತಿಳಿಸುತ್ತವೆ,ಈ ಮರಕ್ಕೆ ಶ್ರೀ ವೃಕ್ಷ ಎಂದೂ ಕರೆಯುತ್ತಾರೆ. ಹೋಮದ ಸಮಯದಲ್ಲಿ ಈ ಮರದ ಕಡ್ಡಿಗಳನ್ನು ಉಪಯೋಗಿಸಿದರೆ ಶುಭ ಫಲ ದೊರೆಯುತ್ತದೆ.

ಬಿಲ್ವಪತ್ರೆಯನ್ನು ಕ್ರಮವಾಗಿ ಸೇವಿಸಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಕಾರಣ ಬಿಲ್ವಪತ್ರೆಯ ಔಷಧಿ ಗುಣದಿಂದ ಕೂಡಿದೆ ಎಷ್ಟೋ ಕಾಯಿಲೆಗಳು ಈ ಬಿಲ್ವಪತ್ರೆಯ ಔಷಧಿಗುಣದಿಂದ ಕೂಡಿದ್ದು ಎಷ್ಟೋ ಕಾಯಿಲೆಗಳು ಈ ಬಿಲ್ವಪತ್ರೆ ಸೇವನೆಯಿಂದ ವಾಸಿಯಾಗಿದೆ. ಬಿಲ್ವಪತ್ರೆಯ ಹಣ್ಣಿನ ಸೇವನೆ ಮಾಡಿದರೆ ಅಜೀರ್ಣ, ತಿಸಾರ, ರಕ್ತದಿಂದಾಗುವ ತೊಂದರೆಗಳು ಪಿತ್ತ, ವಾತ, ಕಫ, ಕಡಿಮೆಯಾಗುತ್ತದೆ ಎಂದೂ ಪರಿಗಣಿಸಲಾಗುತ್ತದೆ.

ಶುಕ್ರವಾರದಂದು ಈ ಬಿಲ್ವ ಫಲವನ್ನು ಪೂಜಿಸಿ ಮನೆಯಲ್ಲಿ ಇಟ್ಟರೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತದೆ. ವ್ಯಾಪಾರ ವ್ಯವಹಾರಗಳು ಅಭಿವೃದ್ಧಿಯಾಗುತ್ತದೆ. ಆಯುರ್ವೇದದಲ್ಲಿ ಈ ಮರದ ಪ್ರತಿಯೊಂದು ಭಾಗವು ಔಷಧಿಯ ಗುಣದಿಂದ ಕೂಡಿದೆ ಎಂದು ಇದನ್ನು ಬೆಳೆಸುತ್ತಾರೆ. ಒಟ್ಟಿನಲ್ಲಿ ಎಲೆಯಿಂದ ಹಿಡಿದು ಪ್ರತಿಯೊಂದು ಭಾಗವು ಮಾನವನಿಗೆ ವರದಾನವಾಗಿ ದೊರಕಿದೆ…….