ಧಾರವಾಡ:
ಧಾರವಾಡದ ಕಟ್ಟಡ ಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಕಟ್ಟಡದ ಅವಶೇಷದಡಿ ಇನ್ನೂ ಹತ್ತಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ.ಎನ್ಡಿಆರ್ಎಫ್,SDRF, ಅಗ್ನಿ ಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.ನಾಲ್ಕನೇ ದಿನವೂ ಅವಶೇಷಗಳಡಿ ಸಿಲುಕಿದವರಿಗೆ ಶೋಧ ಕಾರ್ಯ ನಡೆಯುತ್ತಿದೆ.
ಈ ಮಧ್ಯೆ ದುರಂತ ಸಂಬಂಧ ಎಫ್ಐಆರ್ನಲ್ಲಿ ದಾಖಲಾಗಿದ್ದ ಆರು ಆರೋಪಿಗಳ ಪೈಕಿ ನಾಲ್ವರು ಉಪನಗರ ಪೊಲೀಸರಿಗೆ ಶರಣಾಗಿದ್ದಾರೆ.ಈಗಾಗಲೇ ಪೊಲೀಸರು ಎಂಜಿನಿಯರ್ ವಿವೇಕ್ ಪವಾರ್ನನ್ನು ಬಂಧಿಸಿದ್ದಾರೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಮಾವ ಗಂಗಣ್ಣ ಶಿಂತ್ರಿ, ರವಿ ಸಬರದ್, ಬಸವರಾಜ ನಿಗದಿ, ಮಹಾಬಳೇಶ್ವರ ಪುರದಗುಡಿ ಉಪನಗರ ಪೋಲಿಸರಿಗೆ ಶರಣಾಗಿದ್ದಾರೆ……