Breaking News

ನಕ್ಸಲ್ ನಾಯಕ ರೂಪೇಶ್ ಕೋರ್ಟ್​ಗೆ..!

ವಿಚಾರಣೆ 27ಕ್ಕೆ ಮುಂದೂಡಿಕೆ....

SHARE......LIKE......COMMENT......
ಕೊಡಗು :
ಕೇರಳ ಹಾಗೂ ಕೊಡಗು ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ನಕ್ಸಲ್ ನಾಯಕ ರೂಪೇಶ್​ನನ್ನು ಇಂದು ವಿಚಾರಣೆಗಾಗಿ​ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ವಿಚಾರಣೆ ಮುಗಿದ ಬಳಿಕ ಪೊಲೀಸರು ಈತನನ್ನುಕೇರಳ ಕಡೆ ಕರೆದೋಯ್ದಿದ್ದಾರೆ.
ರೂಪೇಶ್ ಮಾವೋವಾದಿ ಬೆಂಬಲಿಸಿ ಪ್ರಜಾಪ್ರಭುತ್ವ ಉಳಿಸಿ ಅಂತಾ ಘೋಷಣೆ ಕೂಗಿದ್ದ. ಅಲ್ಲದೆ,  ದಕ್ಷಿಣ ಭಾರತದ ನಕ್ಸಲ್ ಮುಖಂಡನಾಗಿರುವ ಈತ ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ .ಇನ್ನು ಮುಂದಿನ ವಿಚಾರಣೆಯನ್ನ ನ್ಯಾಯಾಲಯ ನವೆಂಬರ್ 27ಕ್ಕೆ ಮುಂದೂಡಿದೆ.  ಈತನನ್ನು 3ನೇ ಬಾರಿ ವಿಚಾರಣೆಗಾಗಿ ಮಡಿಕೇರಿಗೆ ಕರೆತರಲಾಗಿತ್ತು.