ಬೆಂಗಳೂರು:
ನನ್ನ ಅಂಬಿಯಿಂದ ನೆರವು ಪಡೆದು ಅವರನ್ನೇ ಬೈಯ್ಯುವುದು ಸರಿಯಲ್ಲ ಎಂದು ಡಿಸಿ ತಮ್ಮಣ್ಣಗೆ ಸುಮಲತಾ ತಿರುಗೇಟು ನೀಡಿದ್ದಾರೆ, ಮಂಡ್ಯದ ಗಂಡು ಅಂಬರೀಷ್ ಬಗ್ಗೆ ಅಥವಾ ನನ್ನ ಬಗ್ಗೆ ಮಾತನಾಡುವಾಗ ದೊಡ್ಡವರಾಗಿರುವ ಸಚಿವ ಡಿ.ಸಿ. ತಮ್ಮಣ್ಣ ಸ್ವಲ್ಪ ಯೋಚನೆ ಮಾಡಿ ಮಾತನಾಡಬೇಕು ಎಂದು ಸುಮಲತಾ ಅಂಬರೀಷ್ ಎಚ್ಚರಿಕೆ ನೀಡಿದ್ದಾರೆ.
ಡಿಸಿ ತಮ್ಮಣ್ಣ, ವಯಸ್ಸಿನಲ್ಲಿ, ಹಿರಿಯರು. ಆದರೆ ನನಗೆ ಭಾವನೆಗಳು, ಸಂಬಂಧಗಳು ಮುಖ್ಯ. ಏನೇ ಅಸಮಾಧಾನ ಇದ್ದರೂ ನನ್ನ ಬಳಿ ನೇರವಾಗಿ ಬಂದು ಹೇಳಿದ್ದರೆ ಅವರಿಗೆ ಗೌರವ ಇರುತ್ತಿತ್ತು. ಈಗ ಎಲ್ಲವನ್ನೂ ಕಳೆದುಕೊಂಡಿದ್ದಾರೆ ನನ್ನ ಅಂಬರೀಷ್‌ರಿಂದ ನೆರವು ಪಡೆದುಕೊಂಡು ಈಗ ಅವರು ಇಲ್ಲ ಎಂದಾಕ್ಷ ಅವರನ್ನೇ ಬೈಯ್ಯುವುದು ನಿಜಕ್ಕೂ ಅಕ್ಷಮ್ಯ ಅಪರಾಧ ಎಂದರು.
ನಾನು ಕಾಂಗ್ರೆಸ್‌ನಿಂದ ಸ್ಪರ್ಧಿಸಬೇಕು ಎಂದು ಕೇಳಿದ್ದೇನೆ. ಕೊಡದಿದ್ದರೆ ಮುಂದಿನ ನಡೆ ಇಡುತ್ತೇನೆ. ಮಂಡ್ಯ ಜಿಲ್ಲೆಯ ಪ್ರತಿ ಮನೆಗೆ ತೆರಳಿ ಅಭಿಪ್ರಾಯ ಸಂಗ್ರಹಿಸಿ, ಮತ ಯಾಚಿಸುತ್ತೇನೆ ಎಂದರು……