ಬೀದರ್:
ಕರ್ನಾಟಕದಲ್ಲಿರುವ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಚೌಬಾರವೂ ಒಂದು. ಎಲ್ಲಾ ಸ್ಮಾರಕಗಳು ಇತಿಹಾಸದ ಘತವೈಭವವನ್ನು ಇಂದಿನ ಪೀಳಿಗೆಯವರಿಗೆ ತಿಳಿಸುತ್ತದೆ. ಚೌಬಾರಾ ಸಿಲಿಂಡರ್ ಆಕಾರದ ಸ್ಮಾರಕವಾಗಿದ್ದು ಬೀದರ್ ಪಟ್ಟಣದ ನಡುವೆ ನಾಲ್ಕು ರಸ್ತೆಗಳು ಕೂಡುವ ಸ್ಥಳದಲ್ಲಿದೆ.
71 ಅಡಿ ಎತ್ತರದ ಈ ಬಹಮನಿ ಪೂರ್ವದ ಸ್ಮಾರಕ ಒಂದು ಕಾಲಕ್ಕೆ ಕಾವಲು ನಿರೀಕ್ಷಣಾ ಕಟ್ಟಡವಾಗಿತ್ತು. ಪಾವಟಿಗೆಗಳ ಮೇಲೆ ಏರುತ್ತಾ ತಲುಪಾದದ ಮೇಲೆ ನಿಂತು ಶತ್ರುಗಳ ಮೇಲೆ ನಿಗಾ ಇಡಲಾಗುತ್ತಿತ್ತು. ಚೌಬಾರದ ದಕ್ಷಿಣಕ್ಕೆ, ಪೂರ್ವಕ್ಕೆ ಹಾಗೂ ಪಶ್ಚಿಮದ ಕಡೆ ಕ್ರಮೇಣವಾಗಿ ಘತಕ ದರವಾಜಾ, ಮಂಗಲಪೇಟ್ ದರವಾಜಾ ಹಾಗೂ ನಯಿ ಕಮಾನುಗಳಿವೆ. ಇವಲ್ಲದೆ ಶಹಾಗಂಜ, ದುಲಹನ್ ದರವಾಜಾ, ತಳಘಾಟ್ ದರವಾಜಾಗಳನ್ನು ಹೊರಗಣ ಕೋಟೆ ಹೊಂದಿದೆ……