Breaking News

04-JAN-2019 ನಿತ್ಯಭವಿಷ್ಯ….

ದಿನ ಪಂಚಾಂಗ..

SHARE......LIKE......COMMENT......

                    ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?

ದಿನ ಪಂಚಾಂಗ..
ಚತುರ್ದಶಿ ತಿಥಿ ಶುಕ್ರವಾರ ಜೇಷ್ಠ ನಕ್ಷತ್ರ
ರಾಹುಕಾಲ :- ಬೆಳಿಗ್ಗೆ 11: 02 ರಿಂದ 12:28 ವರಿಗೆ
ಯಮಕಂಟಕ ಕಾಲ:- ಬೆಳಿಗ್ಗೆ 03:20 ರಿಂದ 04:46 ವರಿಗೆ
ಮೇಷ

ಸಂಕಲ್ಪಿತ ಕೆಲಸಗಳು ಸುಲಭವಾಗಿ ನಡೆಯುತ್ತೆ ಈ ದಿನ. ಕೆಲಸ ಕಾರ್ಯಗಳು ನಿಮ್ಮ ದೂರದ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ ಇದೆ.

ವೃಷಭ

ಯಾವುದೇ ಕೆಲಸ ಕಾರ್ಯಗಳನ್ನು ಮಾಡುವ ಮುನ್ನ ಎರಡು ಬಾರಿ ಯೋಚಿಸಿ,ಕೆಲಸದಲ್ಲಿ ಅಥವಾ ಮನೆಯ ಅಕ್ಕಪಕ್ಕ ಅವರ ಜೊತೆ ಮಾತನಾಡುವ ಎಚ್ಚರಿಕೆ ಅಗತ್ಯ

ಮಿಥುನ

ಸರ್ಕಾರದಿಂದ ಬರಬೇಕಾಗಿದ್ದ ಹಣವು ಬರುವ ಸೂಚನೆ ದೊರೆಯುವುದು.ವಾದ-ವಿವಾದಗಳಿಗೆ ಗಮನ ನೀಡಬೇಡಿ.ಆರೋಗ್ಯದ ಕಡೆ ಗಮನ ಇರಲಿ.

ಕಟಕ

ಮನೆಯ ಕುಟುಂಬದ ಸದಸ್ಯರೊಡನೆ ತೀರ್ಥಯಾತ್ರೆ ಕೈಕೊಳ್ಳುವ ಸಾಧ್ಯತೆ ಇದೆ. ಬಂಧುಗಳಿಂದ ಹಣಕಾಸಿನ ನೆರವು ದೊರೆಯುವುದು.ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ

ಸಿಂಹ

ಹಿರಿಯರಿಂದ ಸಿಗಬೇಕಾದ ಆಸ್ತಿ ವಿಚಾರದಲ್ಲಿ ಮಾತುಕತೆ. ಬರಬೇಕಾದ ಹಣ ಕೈಸೇರುವುದು.
ವೃತ್ತಿ ಜೀವನದಲ್ಲಿ ಸಾಕಷ್ಟು ಒಳ್ಳೆಯ ಅವಕಾಶಗಳು ದೊರೆಯುತ್ತವೆ.

ಕನ್ಯಾ

ಆರ್ಥಿಕ ಜೀವನದಲ್ಲಿ ಏರುಪೇರುಗಳಾಗುತ್ತವೆ. ಆದಾಯಕ್ಕಿಂತ ಖರ್ಚುಗಳು ಹೆಚ್ಚು ಇರುತ್ತೆ
ವ್ಯಾಪಾರ ವ್ಯವಹಾರಗಳು ಅಭಿವೃದ್ಧಿಯತ್ತ ಸಾಗುವುದು

ತುಲಾ

ಕೆಲಸದ ಒತ್ತಡದಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ವೃತ್ತಿಯಲ್ಲಿ ಹೊಸ ಸವಾಲು, ಸಮಸ್ಯೆಗಳು ಎದುರಾಗುವುದು

ವೃಶ್ಚಿಕ

ವ್ಯಾಪಾರ ವ್ಯವಹಾರಗಳು ಮಂದ ಪ್ರಗತಿಯಲ್ಲಿ ಸಾಗುವುದು. ಕೆಲಸದ ವಿಚಾರದಲ್ಲಿ ನಕಾರಾತ್ಮಕ ಚಿಂತೆಗಳು ಕಾಡುವುದು. ಆರ್ಥಿಕ ಲಾಭ ಇದ್ದೇ ಇರುತ್ತೆ.

ಧನಸ್ಸು

ಹಣಕಾಸಿನ ತೊಂದರೆ ಎದುರಾಗುವುದಿಲ್ಲ.ಆದರೆ ಕೆಲಸದ ಒತ್ತಡ ಹೆಚ್ಚು.ವ್ಯಾಪಾರ ವ್ಯವಹಾರದಲ್ಲಿ ಹಿತ ಶತ್ರುಗಳಿಂದ ಸಮಸ್ಯೆ ದಿಢೀರ್ ದೂರದ ಪ್ರಯಾಣ ಸಾಧ್ಯತೆ

ಮಕರ

ಕೆಲಸ ಕಾರ್ಯಗಳು ನಿಮಗೆ ಅಧಿಕ ಒತ್ತಡವನ್ನು ತರುವ ಸಾಧ್ಯತೆ ಇದೆ. ಕುಟುಂಬದ ಹಿರಿಯರ ಆರೋಗ್ಯದ ವಿಚಾರದಲ್ಲಿ ಆಸ್ಪತ್ರೆಯಲ್ಲಿ ಸಮಯ ಕಳೆಯಿರಿ,

ಕುಂಭ

ಹಮ್ಮಿಕೊಂಡ ಕೆಲಸಗಳಲ್ಲಿ ಯಶಸ್ಸು ಪಡೆಯುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ.ವಾಹನವನ್ನು ಎಚ್ಚರಿಕೆಯಿಂದ ಓಡಿಸಿ. ವೃತ್ತಿ ಜೀವನದಲ್ಲಿ ಮಿಶ್ರ ಫಲಿತಾಂಶಗಳು ದೊರೆಯುತ್ತವೆ.

ಮೀನ

ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದು ಖರ್ಚುಗಳು ಹೆಚ್ಚಾಗಿರುತ್ತೆ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ.