Breaking News

ನಿತ್ಯಭವಿಷ್ಯ ದಿನದ ಪಂಚಾಂಗ

ದಿನಾಂಕ:14-10-2018

SHARE......LIKE......COMMENT......

ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

ಮೇಷ
ಸಾಂಸಾರಿಕವಾಗಿ ಸಣ್ಣ ಪುಟ್ಟಗೊಂದಲಗಳಿರುತ್ತವೆ. ಸುಧಾರಿಸಿಕೊಂಡು ಹೋಗುವುದರಲ್ಲಿ ನಿಮ್ಮ ಬುದ್ಧಿವಂತಿಕೆ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಸಿಗದು ಜಾಗ್ರತೆ.

ವೃಷಭ
ವಿದ್ಯಾರ್ಥಿಗಳಿಗೆ ಅಭ್ಯಾಸಬಲ ಹೆಚ್ಚಲಿದೆ. ಆರ್ಥಿಕ ಸ್ಥಿತಿಯು ಉತ್ತಮ. ಹಿರಿಯರ ಸೂಕ್ತ ಸಲಹೆಗಳು ಉಪಯುಕ್ತವಾದಾವು. ದೇವತಾ ದರ್ಶನ ಭಾಗ್ಯದಿಂದ ಶಾಂತಿ ಸಮಾಧಾನ ತರಲಿದೆ.

ಮಿಥುನ
ಯಾವುದಕ್ಕೂ ಕೋಪತಾಪಗಳಿಂದ ತಲೆ ಕೆಡಿಸಿಕೊಳ್ಳದಿರಿ. ವ್ಯಾಪಾರ ವ್ಯವಹಾರಗಳು ಆಗಾಗ ಏರುಪೇರಾಗುತ್ತವೆ. ಹಿರಿಯರ ಸಲಹೆಗಳಿಗೆ ಕಿವಿಗೊಡಿ. ವಿದ್ಯಾರ್ಥಿಗಳಿಗೆ ಉದಾಸೀನತೆ ತಂದೀತು.

ಕಟಕ
ಮಿತ್ರ ವರ್ಗದವರ ಬೆಂಬಲ, ಸಹಕಾರ ಕಾರ್ಯಸಾಧನೆಗೆ ಪೂರಕವಾಗಲಿದೆ. ಧರ್ಮ ಪತ್ನಿಯ ಬೇಡಿಕೆಗಳಿಗೆ ಸ್ಪಂದಿಸಿರಿ. ಕಾರ್ಯಸಾಧನೆಯಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ.

ಸಿಂಹ
ವೃತ್ತಿರಂಗದಲ್ಲಿ ದಿನಗಳು ಸರಾಗವಾಗಿ ನಡೆದು ಹೋಗಲಿವೆ. ಮನೆಯಲ್ಲಿ ಸಹಕಾರ, ಪ್ರೀತಿ ವಿಶ್ವಾಸಗಳು ಸಮಾಧಾನ ತರಲಿವೆ. ಆಗಾಗ ದೇವತಾದರ್ಶನ ಭಾಗ್ಯವಿದೆ. ದಿನಾಂತ್ಯ ಶುಭವಾರ್ತೆ.

ಕನ್ಯಾ
ಸಾಂಸಾರಿಕವಾಗಿ ಸಂಬಂಧಗಳನ್ನು ಗಟ್ಟಿಗೊಳಿಸಿರಿ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದಿಂದ ಮುಂದುವರಿಯುವುದು ಉತ್ತಮ. ಆಗಾಗ ಧನಾಗಮನ ತುಸು ಸಮಾಧಾನ ತಂದು ಕೊಡಲಿದೆ.

ತುಲಾ
ವೃತ್ತಿರಂಗದಲ್ಲಿ ಯಾವುದೇ ವಿಚಾರದಲ್ಲಿ ಸಂಘರ್ಷಕ್ಕೆ ಇಳಿಯದಿರಿ. ದೇಹಾರೋಗ್ಯವನ್ನು ಆಗಾಗ ಗಮನಿಸುತ್ತಾ ಇರಬೇಕು. ಕೌಟುಂಬಿಕವಾಗಿ ಬಂಧುಮಿತ್ರರ ಓಲೈಕೆ ಅಗತ್ಯ ವಿರುತ್ತದೆ.

ವೃಶ್ಚಿಕ
ಕ್ಲೇಶಗಳನ್ನು ಮರೆತು ಮುಂದುವರಿಯಿರಿ. ಆರ್ಥಿಕವಾಗಿ ಪರಿಸ್ಥಿತಿಯು ಕಿರಿಕಿರಿ ತಂದೀತು. ರಾಜಕೀಯದವರಿಗೆ ಖರ್ಚುವೆಚ್ಚಗಳು ಅಧಿಕವಾಗಲಿವೆ. ಮಿತ್ರರ ಸಹವಾಸದ ಬಗ್ಗೆ ಜಾಗ್ರತೆ.

ಧನು
ಯಾವುದೇ ವಿಚಾರದಲ್ಲಿ ಪ್ರಬುದ್ಧರಾಗಿ ಚಂತಿಸಬೇಕಾಗುತ್ತದೆ. ಭಾವನೆಗಳ ವಿಚಾರದಲ್ಲಿ ಮನಸ್ಸನ್ನು ಸಡಿಲಗೊಳಿಸದಿರಿ. ದೇಹಾರೋಗ್ಯದ ಬಗ್ಗೆ ಉದಾಸೀನತೆ ತೋರಿಸದಿರಿ.

ಮಕರ
ವೃತ್ತಿರಂಗವಿರಲಿ ಅಥವಾ ಸಾಂಸಾರಿಕ ಜೀವನದಲ್ಲಿರಲಿ ಹಂತ ಹಂತವಾಗಿ ಅಭಿವೃದ್ಧಿಯು ಗೋಚರಕ್ಕೆ ಬರುತ್ತದೆ. ಬಂದ ಅವಕಾಶಗಳನ್ನು ಸದುಪಯೋಗಿಸಿರಿ. ದಿನಾಂತ್ಯ ಶುಭವಾರ್ತೆ.

ಕುಂಭ
ಕೋಪಗೊಳ್ಳದೇ ಮುಂದುವರಿಯಿರಿ. ಸಾಂಸಾರಿಕವಾಗಿ ಸಂತಸದ ದಿನಗಳಿವು. ಆಗಾಗ ಧನಾಗಮನದಿಂದ ಕಾರ್ಯಸಾಧನೆಗೆ ಪೂರಕವಾಗಲಿದೆ. ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯವಿದೆ.

ಮೀನ
ಸದ್ಯದಲ್ಲೇ ಮಾನಸಿಕವಾಗಿ ಕಾಡುವ ಸಮಸ್ಯೆಗಳು ಪರಿಹಾರವಾಗಲಿವೆ. ಹಾಗೇ ಸಾಂಸಾರಿಕ ನೆಮ್ಮದಿ ತೋರಿ ಬರುತ್ತದೆ. ಆರ್ಥಿಕವಾಗಿ ಆದಷ್ಟು ಖರ್ಚುವೆಚ್ಚಗಳಲ್ಲಿ ನಿಗಾ ಇರಲಿ ಶುಭವಿದೆ.