Breaking News

ನೇತಾಜಿ ಕಲ್ಪನೆಯ ಸೇನೆಯನ್ನು ನಿರ್ಮಿಸುತ್ತಿದೆ ಭಾರತ..!

ಗೌರವಾರ್ಥ ಪ್ರಶಸ್ತಿ ಘೋಷಿಸಿದ ಪ್ರಧಾನಿ....

SHARE......LIKE......COMMENT......

ನವದೆಹಲಿ:

ನೇತಾಜಿ ಸುಭಾಷ್ ಚಂದ್ರ ಬೋಸರು ರಾಷ್ಟ್ರ ನಿರ್ಮಾಣದಲ್ಲಿ ಈಶಾನ್ಯ ರಾಜ್ಯಗಳ ಮಹತ್ವವನ್ನು ಮನಗಂಡಿದ್ದರು, ಅಂತೆಯೇ ನಮ್ಮ ಸರ್ಕಾರ ಸಹ ಈಶಾನ್ಯ ರಾಜ್ಯಗಳ ಮಹತ್ವವನ್ನು ಅರಿತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅ.21 ರಂದು ನೇತಾಜಿ ಸುಭಾಷ್ ಚಂದ್ರ ಬೋಸರು ಸ್ಥಾಪಿಸಿದ್ದ ಆಝಾದ್ ಹಿಂದ್ ಫೌಜ್ ನ 75 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ನೇತಾಜಿ ಬೋಸರ ನೇತೃತ್ವದಲ್ಲಿ ಆಝಾದ್ ಹಿಂದ್ ಫೌಜ್ ನ ಸಾಧನೆಗಳನ್ನು ಸ್ಮರಿಸಿದ್ದು, ಸೂರ್ಯ ಮುಳುಗದ ಸಾಮ್ರಾಜ್ಯದವರ ವಿರುದ್ಧ ನೇತಾಜಿ ಜನತೆಯನ್ನು ಒಗ್ಗೂಡಿಸಿದ್ದರು ಎಂದು ಹೇಳಿದ್ದಾರೆ.

ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹೋರಾಟ ನಡೆಸುತಿದ್ದ ಬೋಸರು ಕಾಂಗ್ರೆಸ್ ನ  ಬದಲಾಗಿ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಿದ್ದರು. ದಕ್ಷಿಣ ಆಫ್ರಿಕಾದ ವಿದ್ಯಾರ್ಥಿ ಚಳುವಳಿಯ ನಾಯಕರು ಬೋಸರನ್ನು ತಮ್ಮ ಹಿರೋ ಎಂದು ಪರಿಗಣಿಸಿದ್ದರೆಂದು ನೆಲ್ಸನ್ ಮಂಡೇಲಾ ಬೋಸರ ಬಗ್ಗೆ ಹೇಳಿದ್ದರು.  ಪ್ರತಿಯೊಬ್ಬರಿಗೂ ಸಮಾನ ಹಕ್ಕು ಹಾಗೂ ಅವಕಾಶಗಳಿರುವ, ತನ್ನ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಇರುವ ಎಲ್ಲಾ ರಂಗಗಳಲ್ಲಿಯೂ ಬೆಳವಣಿಗೆ ಸಾಧಿಸುವ ಸಂವೃದ್ಧ  ರಾಷ್ಟ್ರದ ಕಲ್ಪನೆಯನ್ನು ಬೋಸರು ಹೊಂದಿದ್ದರು. ಸ್ವಾತಂತ್ರ್ಯಾ ನಂತರ ಭಾರತ ಸಾಕಷ್ಟು ಮುಂದೆ ಬಂದಿದೆ. ಆದರೆ ಅವರ ಪರಿಕಲ್ಪನೆಯಲ್ಲಿದ್ದ ದೇಶವಾಗಿಲ್ಲ” ಎಂದು ಮೋದಿ ಹೇಳಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸರ ಕಲ್ಪನೆಯ ಸೇನೆಯನ್ನು ಭಾರತ ನಿರ್ಮಿಸುತ್ತಿದೆ,  ನೇತಾಜಿ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಹಿರಂಗಗೊಳಿಸುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿತು. ಈಗ ನೇತಾಜಿ ಅವರ ಗೌರವಾರ್ಥ ಪ್ರಶಸ್ತಿಯೊಂದನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧನಿ ಮೋದಿ ಘೋಷಿಸಿದ್ದಾರೆ……