ಮುಖದ ಅಂದ ಹೆಚ್ಚಿಸಲು ಐ ಬ್ರೋ ಕೂಡ ಮುಖ್ಯ.ಸ್ವಲ್ಪ ಹುಬ್ಬು ದಪ್ಪವಾಗುತ್ತಿದೆ ಎಂದ ಕೂಡಲೇ ಪಾರ್ಲರ್ಗೆ ಓಡುತ್ತಾರೆ.ಕೇವಲ ಪಾರ್ಲರ್ಗೆ ಹೋದರೆ ಸಾಲದು, ಐ ಬ್ರೋಗೆ ಸರಿಯಾದ ಆರೈಕೆಯನ್ನು ಕೂಡ ನೀಡಬೇಕು ಕೆಳಗಿನ 4 ವಿಧಾನ ಪಾಲಿಸಿ ಸಾಕು…
1..ಹೆಚ್ಚಾಗಿ ಪ್ಲಕ್ ಮಾಡಬೇಡಿ:
ಐ ಬ್ರೋ ಹೆಚ್ಚಾಗಿ ಬೆಳೆಯುತ್ತಿವೆ ಎಂದರೆ, ಅದನ್ನು ಅತಿಯಾಗಿ ಪ್ಲಕ್ ಮಾಡಬೇಡಿ. ಪಾರ್ಲರ್ಗೆ ಹೋಗಿ ಟ್ರಿಮ್ ಮಾಡಿಸಿ ಇಲ್ಲವೆ, ಹೆಚ್ಚಾಗಿ ಬೆಳೆದ ಕೂದಲನ್ನು ಮಾತ್ರ ಪ್ಲಕ್ ಮಾಡಿ. ಪದೇ ಪದೇ ಕೂದಲನ್ನು ಪ್ಲಕ್ ಮಾಡುವುದರಿಂದ ಚರ್ಮ ಎಳೆದಂತಾಗಿ ಕ್ರಮೇಣ ಹುಬ್ಬಿನ ಶೇಪ್ ಹಾಳಾಗುತ್ತದೆ.
2.ಹುಬ್ಬಿನ ಕೂದಲು ಸರಿಯಾಗಿ ಬೆಳೆಯಲು ಬಿಡಿ:
ಐ ಬ್ರೋ ಸ್ವಲ್ಪ ಬೆಳೆದ ತಕ್ಷಣ ಅದನ್ನು ಕತ್ತರಿಸಲು ಹೋಗಬೇಡಿ. ಹೀಗೆ ಮಾಡಿದರೆ, ಹುಬ್ಬಿನ ಶೇಪ್ ಮತ್ತಷ್ಟು ಹಾಳಾಗುತ್ತದೆ. ಹುಬ್ಬಿನ ಮಧ್ಯೆ ಗ್ಯಾಪ್ ಆದರೆ ಕಪ್ಪು ಕಾಡಿಗೆಯಿಂದ ಆ ಗ್ಯಾಪ್ನ್ನು ನೀಟ್ ಆಗಿ ಫಿಲ್ ಮಾಡಿ.
3.ಐ ಬ್ರೋಗೆ ಕಲರ್ ಬೇಡವೇ ಬೇಡ:
ಹುಬ್ಬಿಗೆ ಕಲರ್ ಮಾಡುವ ಟ್ರೆಂಡ್ ಈಗ ಆರಂಭವಾಗಿದೆ. ಆದರೆ ಇದನ್ನು ಎಕ್ಸಪರ್ಟ್ ಜೊತೆ ಮಾತ್ರ ಮಾಡಿಸಿ. ನೀವಾಗಿಯೇ ಮಾಡಲು ಹೋಗಬೇಡಿ. ಇದರಿಂದ ಹುಬ್ಬಿನ ಕೂದಲಿಗೆ ಹಾನಿಯಾಗಿ ಉದುರಲು ಆರಂಭವಾಗಬಹುದು ಅಥವಾ ತುರಿಕೆ ಕೂಡ ಉಂಟಾಗುವ ಸಾಧ್ಯತೆ ‘ಇರುತ್ತದೆ
4.ಎಣ್ಣೆ ಹಚ್ಚಿ:
ರೆಗ್ಯುಲರ್ ಆಗಿ ತೆಂಗಿನ ಎಣ್ಣೆಯನ್ನು ಹುಬ್ಬಿಗೆ ಹಚ್ಚಿ. ಇದರಿಂದ ಹುಬ್ಬು ದಪ್ಪವಾಗುತ್ತದೆ ಜೊತೆಗೆ ಗ್ಲೋಸಿಯಾಗುತ್ತದೆ. ಪೆಟ್ರೋಲಿಯಮ್ ಜೆಲ್ಲಿ ಕೂಡ ಹುಬ್ಬಿನ ಶೇಪ್ ಕಾಪಾಡಲು ಸಹಕಾರಿ.