ಮೈಸೂರು:
ಮೈಸೂರಿನಲ್ಲಿ ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ಸಮ್ಮುಖದಲ್ಲಿ ಜೆಸಿಬಿ ಘರ್ಜನೆ ಜೋರಾಗಿತ್ತು. ಅಗ್ರಹಾರದ ಎಂಜಿ ರಸ್ತೆಯಲ್ಲಿದ್ದ 90 ವರ್ಷಗಳ ಹಳೆಯ ವಾಣಿಜ್ಯ ಅಪಾಯಕಾರಿ ಕಟ್ಟಡಗಳನ್ನ ಪಾಲಿಕೆ ನೆಲಸಮ ಮಾಡಿದೆ.ನಿನ್ನೆ ಖುದ್ದು ಕಟ್ಟಡ ಪರಿಶೀಲನೆ ಮಾಡಿದ್ದ ಪಾಲಿಕೆ ಆಯುಕ್ತ ಸ್ಥಳದಲ್ಲೇ ನೋಟೀಸ್ ನೀಡಿದ್ರು. ಇಂದು ಪೊಲೀಸ್ ಬಂದೋಬಸ್ತ್ನಲ್ಲಿ ಮಾಲೀಕರ ಸಮ್ಮುಖದಲ್ಲೇ ಕಟ್ಟಡ ತೆರವು ಕಾರ್ಯಾಚರಣೆ ನಡೆಸಿದ್ದಾರೆ……