Breaking News

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಖತಂ..!?

ಮೂವರು ಉಗ್ರರನ್ನ ಹೊಡೆದುರುಳಿಸದ ಭಾರತೀಯ ಸೇನೆ....

SHARE......LIKE......COMMENT......

 ಕಾಶ್ಮೀರ:

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್​​ನನ್ನು ಕೊನೆಗೂ ಹೊಡೆದುರುಳಿಸಲಾಗಿದೆ. ಕಳೆದ ರಾತ್ರಿ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಉಗ್ರರ ವಿರುದ್ಧ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ ಮೊಹ್ಮದ್ ಭಾಯ್ ಸೇರಿದಂತೆ ಮೂವರು ಉಗ್ರರನ್ನ ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಂಗ್ಲಿಸ್ ಏರಿಯಾದಲ್ಲಿ ಉಗ್ರರು ಅವಿತುಕೊಂಡಿದ್ದಾರೆಂಬ ಖಚಿತ ಮಾಹಿತಿ ಪಡೆದ ಯೋಧರು ಶೋಧಕಾರ್ಯ ಆರಂಭಿಸಿದ್ರು. ಯೋಧರು ಸ್ಥಳಕ್ಕಾಗಮಿಸುತ್ತಿದ್ದಂತೆ ಉಗ್ರರು ಗುಂಡಿನ ದಾಳಿ ನಡೆಸಿದ್ರು. ಈ ವೇಳೆ ಯೋಧರು ಎನ್​ಕೌಂಟರ್ ನಡೆಸಿದ್ದಾರೆ. ಎನ್​ಕೌಂಟರ್​ ಬಳಿಕ ಸಾವನ್ನಪ್ಪಿದ ಜೈಷೆ ಉಗ್ರ ಮುದಾಸಿರ್ ಅಹ್ಮದ್ ಖಾನ್​, ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಎಂದು ತಿಳಿದು ಬಂದಿದೆ……