Breaking News

ಅರಿಶಿಣ ಬೆಳೆ ಮಧ್ಯೆ ಗಾಂಜಾ ಗಿಡ..!

14 ಗಾಂಜಾ ಗಿಡ ವಶ ,ಆರೋಪಿ ಅಂದರ್ .....

SHARE......LIKE......COMMENT......

ಕೊಳ್ಳೇಗಾಲ:

ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾಗಿಡಗಳನ್ನು ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದ ಅಪರಾಧ ಪತ್ತೆದಳ ತಂಡ ಸೋಮವಾರ ವಶಕ್ಕೆ ಪಡೆದಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದೆ. ತಾಲೂಕಿನ ಜಾಗೇರಿ ಹಳೇಕೋಟೆಯ ಆರ‌್ಮುಗಂ ಮತ್ತು ಲೊಕ್ಕನಹಳ್ಳಿ ಗ್ರಾಮದ ಸಿದ್ದರಾಜು ಬಂಧಿತ ಆರೋಪಿಗಳು.

ಆರ‌್ಮುಗಂ ತನ್ನ ಜಮೀನಿನ ಅರಿಶಿಣ ಬೆಳೆ ಮಧ್ಯೆ 13 ಗಾಂಜಾ ಗಿಡಗಳನ್ನು ಬೆಳೆದಿದ್ದ. ವಿಷಯ ತಿಳಿದ ಡಿವೈಎಸ್ಪಿ ಅಪರಾಧ ಪತ್ತೆದಳ ತಂಡ ದಾಳಿ ನಡೆಸಿ, ಆರೋಪಿ ಸಮೇತ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದೆ. ಅಂತೆಯೇ, ಮತ್ತೊಬ್ಬ ಆರೋಪಿ ಸಿದ್ದರಾಜು ಅಕ್ರಮವಾಗಿ ತನ್ನ ಮನೆ ಹಿತ್ತಲಿನಲ್ಲಿ 6 ಅಡಿ ಎತ್ತರದ 1 ಗಾಂಜಾ ಗಿಡವನ್ನು ಬೆಳೆದಿದ್ದ. ಮಾಹಿತಿ ಮೇರೆಗೆ ಅಪರಾಧ ಪತ್ತೆದಳ ತಂಡ ದಾಳಿ ಮಾಡಿ ಸಿದ್ದರಾಜುನನ್ನು ಬಂಧಿಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆದು ಹನೂರು ಪೊಲೀಸ್ ಠಾಣೆಗೆ ಪ್ರಕರಣವನ್ನು ಹಸ್ತಾಂತರಿಸಿದೆ.

ದಾಳಿಯಲ್ಲಿ ಡಿವೈಎಸ್ಪಿ ಪುಟ್ಟಮಾದಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ಡಿ.ಜಿ.ರಾಜಣ್ಣ, ಡಿವೈಎಸ್ಪಿ ಕಚೇರಿಯ ಸಹಾಯಕ ಎಎಸ್‌ಐ ಚೆಲುವರಾಜು, ಮುಖ್ಯಪೇದೆ ಶಂಕರ್, ಗೋವಿಂದ, ಶಕಿನಾಯಕ, ರಘು, ಪೇದೆಗಳಾದ ಲೋಕೇಶ್, ರಘು, ಖಾನ್ ಭಾಗವಹಿಸಿದ್ದರು……