ಮೆಕ್ಸಿಕೊ :
ಪ್ರೀತಿಗಾಗಿ ಹುಡುಗ –ಹುಡುಗಿಯರು ಒಬ್ಬರನೊಬ್ಬರು ಮೆಚ್ಚಿಸಲು ದುಬಾರಿಯಾದ, ಅವರಿಗೆ ಇಷ್ಟವಾದ ಉಡುಗೊರೆಯನ್ನು ನೀಡುವುದನ್ನು ನಾವು ಕೇಳಿರುತ್ತೇವೆ. ಆದರೆ ಮೆಕ್ಸಿಕೋದ ಯುವತಿಯೊಬ್ಬಳು ತನ್ನ ಮಾಜಿ ಬಾಯ್‌ಫ್ರೆಂಡ್ ಅನ್ನು ಮೆಚ್ಚಿಸಲು ನೀಡಿದ ಉಡುಗೊರೆ ಏನು ಎಂಬುದನ್ನು ಕೇಳಿದರೆ ನೀವೇ ಬೆಚ್ಚಿ ಬೀಳ್ತೀರಾ..
ಯೆಸ್, ಮೆಕ್ಸಿಕೋದ ಜಲಿಸ್ಕೋದ ಯುವತಿ ಪೌಲಿನಾ ಕ್ಯಾಸಿಲಾಸ್ ಲ್ಯಾಂಡೆರೋಸ್ ತನ್ನ ಮಾಜಿ ಪ್ರಿಯಕರ ಡೇನಿಯಲ್ ರಮಿರೇಝ್ ನನ್ನು ಮೆಚ್ಚಿಸಲು ವಿಚಿತ್ರವಾದ ಉಡುಗೊರೆಯೊಂದನ್ನು ಆತನಿಗೆ ನೀಡಿದ್ದಾಳೆ.
ಈಕೆ ದೇಹ ಮಾರ್ಪಾಡು ಮಾಡಿಕೊಳ್ಳುವುದಕ್ಕಾಗಿ ಅನೇಕ ಬಾರಿ ಶಸ್ತ್ರಚಿಕಿತ್ಸೆಗಳನ್ನು ಮಾಡಿಕೊಂಡಿದ್ದಳು. ಇಂತಹ ಹುಚ್ಚಿರುವ ಈಕೆ ತನ್ನ ಮಾಜಿ ಪ್ರಿಯಕರನನ್ನು ಮೆಚ್ಚಿಸಲು ತನ್ನ ಹೊಕ್ಕುಳನ್ನೇ ಕತ್ತರಿಸಿ ಉಡುಗೊರೆಯಾಗಿ ನೀಡಿದ್ದಾಳಂತೆ……