ಮಾಜಿ ಒಲಂಪಿಯನ್ ಅಶ್ವಿನಿ ಪೊನ್ನಪ್ಪ ಮತ್ತು ಕೊಡಗು ಬ್ಯಾಡ್ಮಿಂಟನ್ ಸಂಸ್ಥೆಯ ತರಬೇತುದಾರ ಅರುಣ್ ಪೆಮ್ಮಯ್ಯ ಮತ್ತು ಪ್ಲಾಂಟರ್ಸ್ ಅಸೋಸಿಯೇಷನ್ ಈಕೆಯ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡಲಾಗುತ್ತಿದೆ……
ಕೊಡಗಿನ ಬಾಲ ಪ್ರತಿಭೆ..!
ಬ್ಯಾಡ್ಮಿಂಟನ್ನಲ್ಲಿ ರಾಷ್ಟ್ರ ಮಟ್ಟದ ಸಾಧನೆ....

ಸೈನಾ ನೆಹ್ವಾಲ್, ಅಶ್ವಿನಿ ಪೊನ್ನಪ್ಪ ಮಾದರಿಯಲ್ಲಿ ದೇಶಕ್ಕೆ ಕೀರ್ತಿ ತರಬೇಕು ಎಂದು ಈಗಿನಿಂದಲೇ ಕನಸು ಕಾಣುತ್ತಿದ್ದಾಳೆ.
ಈ ಪುಟ್ಟ ಪೋರಿಯ ಹೆಸರು ದಿನಾ ಭೀಮಯ್ಯ. ಮೂಲತಃ ಕೊಡಗಿನ ಗೋಣಿಕೊಪ್ಪಲು ಗ್ರಾಮದವಳು. ದಿನಾ ಭೀಮಯ್ಯ ಮತ್ತು ಕುಸುಮ್ ದಂಪತಿಯ ಪುತ್ರಿ. ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ, ಶಾಲೆ, ಜಿಲ್ಲೆ, ರಾಜ್ಯಮಟ್ಟದ ಬ್ಯಾಡ್ಮಿಂಟನ್ನಲ್ಲಿ ಭಾಗವಹಿಸಿ ಇದೀಗ ಅಂಡರ್ 12 ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ, ವಿವಿಧ ವಿಭಾಗದಲ್ಲಿ ಎರಡು ಮತ್ತು ಮೂರನೇಯ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಪಿಎನ್ಬಿ ಮೆಟ್ಲೈಫ್ ಸಾಥ್ ಜೋನ್ ಕ್ರೀಡಾಕೂಟದಲ್ಲಿ ತೃತೀಯ ಸ್ಥಾನ, ಎಗೋನ್ ಸಂಸ್ಥೆ ನಡೆಸಿದ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು 12 ವಯೋಮಿತಿಯ ವಿಭಾಗದಲ್ಲಿ ರಾಜ್ಯದ ಅದರಲ್ಲೂ ಕೊಡಗಿನ ಬಾಲ ಪ್ರತಿಭೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.