ಚಿತ್ರದುರ್ಗ:
ಚಿತ್ರದುರ್ಗದಲ್ಲಿರುವ ಮದಕರಿ ನಾಯಕನ ಪ್ರತಿಮೆ ಮೇಲೆ ಯುವಕನೋರ್ವ ಕುಳಿತುಕೊಂಡು ಫೋಟೋಗೆ ಫೋಸ್ ನೀಡಿದ್ದಾನೆ. ಈ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಮದಕರಿ ನಾಯಕರಿಗೆ ಅವಮಾನಿಸಿದ್ದಕ್ಕೆ ಯುವಕನ ವಿರುದ್ಧ ಫೇಸ್ಬುಕ್ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮದಕರಿ ನಾಯಕನ ಪ್ರತಿಮೆಗೆ ಹೂ ಮಾಲೆ ಹಾಕಲು ಹೋದಾಗ ಫೋಟೋಗೆ ಫೋಸ್ ನೀಡಿದ್ದು ಗೊತ್ತಾಗಿದೆ. ಇನ್ನು ಪ್ರತಿಮೆ ಬಳಿ ತೆರಳಲು ಕೆಲ ತಿಂಗಳ ಹಿಂದೆ ಮೆಟ್ಟಿಲು ಅಳವಡಿಸಿದ್ದಕ್ಕೂ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಮೆಟ್ಟಿಲು ತೆರವಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸೋ ಸಾಧ್ಯತೆ ಇದೆ……