Breaking News

#MeTOOದಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಬಹುದು..!

ಸಿಎಂಗೆ ಎಚ್ಚರಿಸಿದ ಕುಮಾರ ಬಂಗಾರಪ್ಪ....

SHARE......LIKE......COMMENT......

ಶಿವಮೊಗ್ಗ:

ಸುಳ್ಳಿಗೆ ಯಾವಾಗಲೂ ಆಧಾರ ಇರುವುದಿಲ್ಲ. ಇದೇ ರೀತಿ ಮಾತನಾಡಿದರೆ ಮುಂದೆ ಮೀ ಟೂ ಅಭಿಯಾನದಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಬಹುದು ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ಮತ್ತು ಕಾಂಗ್ರೆಸ್ ಜಾತಿಯ ಹೆಸರಿನಲ್ಲಿ ಚುನಾವಣೆ ಮಾಡುವ ಪ್ರಯತ್ನ ನಡೆಸುತ್ತಿವೆ. ಬಿಜೆಪಿ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಮಾಡುತ್ತಿದೆ. ಸಿಎಂ ಕುಮಾರಸ್ವಾಮಿ ಅವರು ಸೊರಬಕ್ಕೆ ಬಂದಾಗ ನನ್ನನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಸುಳ್ಳಿಗೆ ಯಾವಾಗಲೂ ಸಾಕ್ಷಿ, ಆಧಾರ ಇರುವುದಿಲ್ಲ.

ನನ್ನ ಬಗ್ಗೆ ಮಾತನಾಡಿದರೆ ನಿಮ್ಮ ಬಗ್ಗೆ ಸಾಕ್ಷಿ ಸಮೇತ ನಾನು ಮಾತನಾಡುತ್ತೇನೆ,ಇನ್ನೂ ಹೆಚ್ಚು ಮಾತನಾಡಿದರೆ ಮೀ ಟೂದಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಬಹುದು ಎಂದು ಎಚ್ಚರಿಕೆ ನೀಡಿದರು.ಸಿಎಂ ಕುಮಾರಸ್ವಾಮಿ ಕುರಿತಾದ ಬೇಕಾದಷ್ಟು ಸಾಕ್ಷಿಗಳು ಸಾಮಾಜಿಕ ಜಾಲತಾಣದಲ್ಲಿ ಲಿಂಕ್​ ಆಗಿವೆ. ಹುಟ್ಟುಹಬ್ಬ ಆಚರಣೆ ಮಾಡಿರುವುದು, ಮತ್ತೊಂದು ಮಾಡಿರುವುದು, ತಲೆಮರೆಸಿಕೊಂಡಿರುವುದು ಸಾಕಷ್ಟು ಲಿಂಕ್​ಗಳು ಸಿಗುತ್ತವೆ. ನಿಮ್ಮ ಕುಟುಂಬ ಭಾಗವಾದರೆ, ಅವರನ್ನು ಸ್ವೀಕರಿಸಿ ರಾಮನಗರ ಚುನಾವಣೆಯಲ್ಲಿ ಒಟ್ಟಿಗೆ ಚುನಾವಣೆ ಎದುರಿಸಿ, ಅವರನ್ನು ಮತ್ತೊಂದೆಡೆ ಚುನಾವಣಾ ಅಭ್ಯರ್ಥಿಯನ್ನಾಗಿ ಮಾಡಿ. ಇನ್ನೊಬ್ಬರ ಜತೆ ಸಂಬಂಧ ಹೊಂದಬಹುದೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ​ ಎಂದು ರಾಧಿಕಾ ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿ ಮಾತನಾಡಿದರು…..